ಗ್ರಾಹಕರ ಒತ್ತಾಯದ ಮೇರೆಗೆ ಮೈಸೂರು ಮಹಾನಗರ ಪಾಲಿಕೆಯು ಕೆಲ ತಿಂಗಳುಗಳಿಂದ ನೀರಿನ ಕರವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಿಸಿಕೊಳ್ಳುತ್ತಿತ್ತು. ಇದು ಬಹಳಷ್ಟು ಬಳಕೆದಾರರಿಗೆ ತ್ವರಿತವಾಗಿ ಸಂದಾಯ ಮಾಡಲು ಅನುವಾಗುವುದಲ್ಲದೇ, ಅನುಕೂಲಕರವಾಗಿಯೂ ಇತ್ತು. ಏಪ್ರಿಲ್ ತಿಂಗಳ ನೀರಿನ ಕರವನ್ನು ಗ್ರಾಹಕರು ಆನ್‌ಲೈನ್ ಮುಖಾಂತರ ಪಾವತಿಸಿದ್ದಾರೆ.
ಮೇ ಮಾಹೆಯ ಬಳಕೆಯ ಕರ ಆನ್‌ಲೈನ್‌ನಲ್ಲಿ ಪಾವತಿಯಾಗುತ್ತಿಲ್ಲ. ಇದರಿಂದಾಗಿ ಸಂಬಂಧಿಸಿದ ಕೌಂಟರುಗಳಿಗೆ ಅಲೆಯಬೇಕಾದ ಪರಿಸ್ಥಿತಿ ಮತ್ತೆ ಬಂದೊದಗಿದೆ. ಸುಗಮವಾಗಿ ನಡೆದುಕೊಂಡು ಹೋಗುತ್ತಿದ್ದ ಈ ವ್ಯವಸ್ಥೆಯನ್ನು ಮತ್ತೆ ಯಥಾಸ್ಥಿತಿಗೆ ತರಲು ಪಾಲಿಕೆ ಕ್ರಮವಹಿಸಲಿ.
-ವಿಜಯ್ ಹೆಮ್ಮಿಗೆ, ಮೈಸೂರು





