Mysore
24
few clouds

Social Media

ಶುಕ್ರವಾರ, 18 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ ವಿದ್ಯಮಾನ. ಮೂಲತಃ ಮುಷ್ಕರದ ಉದ್ದೇಶವೇ ಔದ್ಯಮಿಕ ಸೇವೆ-ಕಾರ್ಯಾಚರಣೆಗಳಿಗೆ ಭಂಗ ಉಂಟುಮಾಡುವುದು. ತನ್ಮೂಲಕ ಗ್ರಾಹಕರಿಗೆ ಅನಾನುಕೂಲ ಉಂಟುಮಾಡುವುದು. ಇದು ಕಾರ್ಮಿಕ ಹೋರಾಟದ ಒಂದು ಶಾಂತಿಯುತ ಮಾರ್ಗ. ಗಾಂಽ, ಅಂಬೇಡ್ಕರ್ ಇವರೆಲ್ಲರೂ ಇದನ್ನೇ ಅನುಸರಿಸಿದ್ದಾರೆ.

ಇತ್ತೀಚಿನ ಬ್ಯಾಂಕ್ ನೌಕರರ ಮುಷ್ಕರವೂ ಇದೇ ಹಾದಿಯಲ್ಲಿದೆ. ಸರಣಿ ರಜೆ ಇರುವ ಸಮಯದ ಹಿಂದಿನ-ಮುಂದಿನ ದಿನ ಮುಷ್ಕರ ಹೂಡುವ ಮೂಲಕ ಬ್ಯಾಂಕ್ ನೌಕರರು ಐಬಿಎ ಗೆ ಒಂದು ಸ್ಪಷ್ಟ ಸಂದೇಶ ನೀಡಿzರೆ.
ಗ್ರಾಹಕರಿಗೆ ತೊಂದರೆಯಾಗುವುದು ಸಹಜ ಅದನ್ನು ನಿವಾರಿಸುವುದು ಬ್ಯಾಂಕುಗಳ ಜವಾಬ್ದಾರಿ. ಕಾರ್ಮಿಕ ಸಂಘಗಳದ್ದಲ್ಲ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಶೇಕಡಾ ೮೦ರಷ್ಟು ವಹಿವಾಟುಗಳಿಗೆ ಯಾವುದೇ ಭಂಗ ಉಂಟಾಗುವುದಿಲ್ಲ. ಬ್ಯಾಂಕ್ ಯೂನಿಯನ್‌ಗಳಲ್ಲಿ ಐಕ್ಯತೆ ಇದ್ದರೆ , ಆನ್‌ಲೈನ್ ಸೇವೆಗೆ ಭಂಗ ಉಂಟಾಗುವಂತೆ ಮುಷ್ಕರ ಹೂಡಬಹುದು.

೧೬-೦೯-೨೦೧೬ರ ‘ಆಂದೋನಲ’ ಪತ್ರಿಕೆಯ ಓದುಗರ ವಿಭಾಗದಲ್ಲಿ ಬೂಕನಕೆರೆ ವಿಜೇಂದ್ರ ಅವರು ಈ ಮುಷ್ಕರ ಹೂಡಿದ ಯೂನಿಯನ್‌ಳ ವಿರುದ್ಧ ಆರ್‌ಬಿಐ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿzರೆ. ಆರ್‌ಬಿಐಗೂ ಐಬಿಎ ವಿರುದ್ಧದ ಮುಷ್ಕರಕ್ಕೂ ಸಂಬಂಧವೇ ಇಲ್ಲ. ಕಾರ್ಮಿಕರು ಒಂದು ದಿನದ ವೇತನ ಕಳೆದುಕೊಂಡು ಮುಷ್ಕರ ಹೂಡುತ್ತಾರೆ. ನಾಲ್ಕು ದಿನಗಳು ಕಳೆದು ಶಾಖೆಗಳಲ್ಲಿ ಬಾಕಿ ಇರುವ ಎಲ್ಲ ಕೆಲಸಗಳನ್ನೂ ಅವರೇ ನಿರ್ವಹಿಸುತ್ತಾರೆ. ಇದೇ ಶಿಕ್ಷೆ ಅಲ್ಲವೇ ?‌

-ನಾ. ದಿವಾಕರ, ಮೈಸೂರು

 

Tags:
error: Content is protected !!