ಇನ್ನೂ ಒಂದುವರ್ಷ ಕಳೆದಿಲ್ಲ. ಅಷ್ಟರಲ್ಲಿ ಮತ್ತೆ ತೈವಾನ್ ಮತ್ತು ಚೀನಾ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಹಿಂದಿನಂತೆಯೇ ಮಿಲಿಟರಿ ದಾಳಿ ನಡೆಸಿ ತೈವಾನ್ ದ್ವೀಪವನ್ನು ಅತಿಕ್ರಮಿಸಿಕೊಳ್ಳಲು ಚೀನಾ ತುದಿಗಾಲಲ್ಲಿ ನಿಂತಂತೆ ತೋರುತ್ತಿದೆ. ಆ ರೀತಿ ಅತಿಕ್ರಮಿಸಿಕೊಂಡರೆ ಮುಂದಿನ ಬೆಳವಣಿಗೆಗಳನ್ನು ನಿಭಾಯಿಸಬಹುದು ಎಂದು ಅನ್ನಿಸಿದರೆ ಚೀನಾ ಮುಂದಕ್ಕೆ ಹೆಜ್ಜೆ ಇಡಬಹುದು. ಅಥವಾ ಪರಿಸ್ಥಿತಿ ತನಗೆ ಅನುಕೂಲಕರ ಅಲ್ಲ ಎಂದೆನ್ನಿಸುವವರೆಗೆ ಚೀನಾ ಅತಿಕ್ರಮಣ ನಿರ್ಧಾರವನ್ನು ಮುಂದೂಡಬಹುದು. ಮತ್ತೊಂದು ಉಕ್ರೇನ್ ಆಗಲಿದೆಯೇ ತೈವಾನ್?
ಈ ಬೆಳವಣಿಗೆ ಭಾರತದ ದೃಷ್ಟಿಯಿಂದ ಬಹಳ ಮುಖ್ಯವಾದುದು. ಭಾರತ ತೈವಾನ್ ವಿಚಾರದಲ್ಲಿ ‘ಏಕ ಚೀನಾ’ ನೀತಿಯನ್ನು ಅನುಸರಿಸುತ್ತ ಬಂದಿತ್ತು. ಅಂದರೆ ತೈವಾನ್ ದ್ವೀಪ ಮತ್ತು ಟಿಬೇಟ್ ಪ್ರದೇಶ ಚೀನಾದ ಭಾಗ ಎಂದು ಭಾರತ ಹಿಂದೆ ಹೇಳುತ್ತಿತ್ತು. ಹೀಗೆ ಹೇಳಿದ್ದು ಏಕೆಂದರೆ, ಚೀನಾ ದೇಶ ಅರುಣಾಚಲ ಪ್ರದೇಶ ತನ್ನ ಭಾಗ ಎಂದು ಹೇಳುವುದನ್ನು ಬಿಟ್ಟು ಅದು ಭಾರತದ ಭಾಗ ಎಂದು ಹೇಳುತ್ತದೆಂದು ತಿಳಿಯಲಾಗಿತ್ತು. ಚೀನಾ ಅಂಥ ಸೂಚನೆ ನೀಡಿತ್ತು ಕೂಡ. ಆದರೆ ಚೀನಾ ಹಾಗೆ ಮಾಡಲಿಲ್ಲ. ಅರುಣಾಚಲ ಪ್ರದೇಶ ತನ್ನದೆಂದು ಹೇಳುತ್ತ ಬಂತು; ಈಗಲೂ ಹೇಳುತ್ತಿದೆ. ಹೀಗಾಗಿ ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದ ಕಾಲದಿಂದಲೂ ತೈವಾನ್ ಕುರಿತಂತೆ ತನ್ನ ಹಳೆಯ ನಿಲುವನ್ನು ಭಾರತ ಪುನರುಚ್ಚರಿಸುತ್ತಿಲ್ಲ. ಚೀನಾ ಆಗ್ರಹ ಮಾಡುತ್ತಲೇ ಇದೆ. ಆದರೆ ಭಾರತ ಪ್ರತಿಕ್ರಿೆುಂ ತೋರಿಸಿಲ್ಲ.
ಇಷ್ಟೇ ಅಲ್ಲ ಇತ್ತೀಚಿನ ವರ್ಷಗಳಲ್ಲಿ ಚೀನಾ ದೇಶ ಭಾರತಕ್ಕೆ ಅಂಟಿಕೊಂಡಿರುವ ಟಿಬೆಟ್‌ನ ಕೆಲವು ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ. ಅರುಣಾಚಲ ಪ್ರದೇಶದ ಭಾರತ ಗಡಿಯಲ್ಲಿ ಸೇನಾ ನೆಲೆ ಅಥವಾ ಜನವಸತಿ ಗ್ರಾಮವೊಂದನ್ನು ಕಟ್ಟಿದೆ. ಚೀನಾ ತನ್ನ ಅತಿಕ್ರಮಣ ನೀತಿಯನ್ನು ಮುಂದುವರಿಸಿರುವುದು ಇದರಿಂದ ಸ್ಪಷ್ಟವಾಗಿ ಗೋಚರವಾಗುತ್ತದೆ. ಇಂದು ತೈವಾನ್‌ಗೆ ಬಂದ ಸ್ಥಿತಿ ಮುಂದೊಂದು ದಿನ ಭಾರತಕ್ಕೂ ಬರಬಹುದು. ಹೀಗಾಗಿಯೇ ತೈವಾನ್ ಬೆಳವಣಿಗೆ ಭಾರತಕ್ಕೆ ಮುಖ್ಯವಾಗಿದೆ. ಅಂತಾರಾಷ್ಟ್ರೀಯ ಒತ್ತಡದಿಂದ ಚೀನಾವು ತೈವಾನ್ ದಾಳಿಯ ತನ್ನ ಉದ್ದೇಶವನ್ನು ಕೈಬಿಡುವುದೇ ಇಲ್ಲವೆ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ತೈವಾನ್‌ಗೆ ಸಂಬಂಧಿಸಿದಂತೆ ಕಂಡುಬಂದಿರುವ ಅಂತಾರಾಷ್ಟ್ರೀಯ ಒತ್ತಡ ಅರುಣಾಚಲ ಪ್ರದೇಶ ಮತ್ತು ಟಿಬೇಟ್ ವಿಚಾರದಲ್ಲಿಯೂ ಬರಬೇಕು ಎಂದು ಭಾರತ ನಿರೀಕ್ಷಿಸುತ್ತದೆ.
ಹಾಗೆ ನೋಡಿದರೆ ಚೀನಾ ಈಗ ತೈವಾನ್ ಅತಿಕ್ರಮಣ ಮಾಡುವಂಥ ಪರಿಸ್ಥಿತಿಯಲ್ಲಿ ಇಲ್ಲ. ಚೀನಾದ ಹಣಕಾಸು ಸ್ಥಿತಿ ಉತ್ತಮವಾಗಿಲ್ಲ. ಕೋವಿಡ್‌ನಿಂದಾಗಿ ಅಭಿವೃದ್ಧಿ ದರ ಬಿದ್ದುಹೋಗಿದೆ. ಹಾಗೆಂದು ಚೀನಾ ತನ್ನ ಕೋಪವನ್ನು ಪ್ರದರ್ಶಿಸದೆ ಇಲ್ಲ. ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್ ನಾನ್ಸಿ ಪೆಲೋಸಿ ತನ್ನ ವಿರೋಧದ ನಡುವೆಯೂ ತೈವಾನ್‌ಗೆ ಭೇಟಿ ನೀಡಿದ್ದುದು ಚೀನಾವನ್ನು ಕೆರಳಿಸಿದೆ. ಕಳೆದ ೨೫ ವರ್ಷಗಳಲ್ಲಿ ಅಮೆರಿಕದ ಉನ್ನತ ಮಟ್ಟದ ಮುಖಂಡರೊಬ್ಬರು ತೈವಾನ್ ಭೇಟಿ ನೀಡಿದ್ದುದು ಇದೇ ಮೊದಲು. ಇದು ಅಮೆರಿಕದ ಶ್ವೇತಭವನ ಸಿದ್ಧಮಾಡಿದ ಕಾರ್ಯಕ್ರಮ ಆಗಿರಲಿಲ್ಲ. ಹೇಗಿದ್ದರೂ ಖಾಸಗಿ ಭೇಟಿ ಎಂದು ಅಧ್ಯಕ್ಷ ಜೋ ಬೈಡನ್ ಸುಮ್ಮನಿದ್ದರು. ಆದರೆ ಚೀನಾ ಸುಮ್ಮನಿರಲಿಲ್ಲ. ಪೆಲೋಸಿ ಭೇಟಿ ಖಾಸಗಿಯದಾಗಿದ್ದರೂ ಅದರ ಪರಿಣಾಮಗಳನ್ನು ಚೀನಾ ನಾಯಕರು ಸರಿಯಾಗಿೆುೀಂ ಗುರುತಿಸಿದ್ದರು. ತೈವಾನ್ ಪ್ರಜಾತಂತ್ರ ರಕ್ಷಿಸಲು ಅಮೆರಿಕ ಸದಾ ಸಿದ್ಧವಾಗಿದೆ ಎಂದು ಪೆಲೋಸಿ ಅಲ್ಲಿ ಹೇಳಿಕೆ ನೀಡಿದರು. ತೈವಾನ್‌ಗೆ ಪ್ರತ್ಯೇಕ ಅಸ್ತಿತ್ವ ಇದೆ ಎಂದು ಸಾರಲು ಅಮೆರಿಕ ಈ ತಂತ್ರ ಬಳಸುತ್ತಿರಬಹುದು ಎಂದು ಚೀನಾ ಭಾವಿಸಿತು. ಹೀಗಾಗಿೆುೀಂ ಪರಿಸ್ಥಿತಿ ಯುದ್ಧ ಸಿಡಿಯುವ ಹಂತಕ್ಕೆ ಬಂದು ನಿಂತಿದೆ.
ತೈವಾನ್ ಪ್ರದೇಶದ ಸುತ್ತಲೂ ಚೀನಾ ಭಾರಿ ಪ್ರಮಾಣದ ಮಿಲಿಟರಿ ಕವಾಯತನ್ನು ನಡೆಸುತ್ತಿದೆ. ತಾನು ನಡೆಸುತ್ತಿರುವ ಮಿಲಿಟರಿ ಕವಾಯತು ದೇಶದ ಸಾರ್ವಭೌಮತ್ವ ಮತ್ತು ಗಡಿಯನ್ನು ಕಾಯ್ದುಕೊಳ್ಳುವ ಉದ್ದೇಶ ಹೊಂದಿದೆ ಎಂದು ಚೀನಾ ಹೇಳಿದೆ. ಅರವತ್ತಕ್ಕೂ ಹೆಚ್ಚು ಕ್ಷಿಪಣಿಗಳನ್ನು ತೈವಾನ್ ಸುತ್ತಲೂ ಉಪಕರ ಚೀನಾ ಕಳೆದ ಮೂರು ದಿನಗಳಲ್ಲಿ ಹಾರಿಸಿದೆ. ತೈವಾನ್ ಸುತ್ತ ಗಡಿಗೆ ಸಮೀಪದಲ್ಲಿೆುೀಂ ಯುದ್ಧ ವಿಮಾನಗಳು ಹಾರಾಟ ನಡೆಸಿವೆ. ತನ್ನ ರಕ್ಷಣಾ ವಲಯವನ್ನು ಚೀನಾ ಉಲ್ಲಂಘಿಸುತ್ತಿದೆ ಎಂದು ತೈವಾನ್ ರಕ್ಷಣಾ ಸಚಿವರು ಆರೋಪಿಸಿದ್ದಾರೆ. ತೈವಾನ್ ಮತ್ತು ಚೀನಾ ನಡುವೆ ಇರುವ ಜಲಸಂಧಿಯೂ ಸೇರಿದಂತೆ ದೇಶದ ಸುತ್ತಲೂ ಸಮುದ್ರದಲ್ಲಿ ಯುದ್ಧ ನೌಕೆಗಳು ಆಕ್ರಮಣಕಾರಿಯಾಗಿ ಸಂಚರಿಸುತ್ತಿವೆ ಎಂದು ತೈವಾನ್ ಹೇಳುತ್ತಿದೆ. ಕೆಲವು ಕ್ಷಿಪಣಿಗಳು ಜಪಾನ್ ಆರ್ಥಿಕ ವಲಯದ ಸಮುದ್ರದಲ್ಲಿ ಬಿದ್ದಿದ್ದು ಆತಂಕಕ್ಕೆ ಕಾರಣವಾಗಿದೆ. ತೈವಾನ್‌ಗೆ ದಿಗ್ಬಂಧನ ವಿಧಿಸಿದಂತೆ ಕಾಣುತ್ತಿದೆ.
ತೈವಾನ್‌ನಿಂದ ಹೊರಹೋಗಬೇಕಾದ ಸರಕು ತುಂಬಿದ ಹಡಗುಗಳ ಪ್ರಯಾಣವನ್ನು ರದ್ದು ಮಾಡಲಾಗಿದೆ. ಅಷ್ಟೇ ಅಲ್ಲ ತೈವಾನ್‌ಗೆ ಬರಬೇಕಾದ ಹಲವು ವಿಮಾನಗಳ ಪ್ರಯಾಣ ರದ್ದಾಗಿದೆ. ತೈವಾನ್ ಮುಖ್ಯವಾಗಿ ವಿಶ್ವದ ಶೇ.೬೦ ಭಾಗ ಎಲೆಕ್ಟ್ರಾನಿಕ್ ವಸ್ತುಗಳನ್ನು, ಸೆಮಿಕಂಡಕ್ಟರ್‌ಗಳನ್ನೂ ಉತ್ಪಾದಿಸುತ್ತದೆ. ರಫ್ತು ನಿಂತರೆ ಜಾಗತಿಕ ಎಲೆಕ್ಟ್ರಾನಿಕ್ ಉದ್ಯಮದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಚೀನಾದ ನಾಯಕರಿಗೆ ಇದು ಗೊತ್ತಿದೆ. ಅಮೆರಿಕ ತೈವಾನ್ ಸಮೀಪದ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ತನ್ನ ಎರಡು ಯುದ್ಧನೌಕೆಗಳನ್ನು ತಂದು ನಿಲ್ಲಿಸಿದೆ.
ಹಾಗೆ ನೋಡಿದರೆ ಯುದ್ಧಕ್ಕಿಳಿಯುವ ಸ್ಥಿತಿಯಲ್ಲಿ ಅಮೆರಿಕವಾಗಲೀ, ಚೀನಾ ಆಗಲಿ ಇಲ್ಲ. ಇತರ ದೇಶಗಳಿಗೂ ಯುದ್ಧ ಬೇಡ. ಆದರೆ ಚೀನಾ ಯುದ್ಧದ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ. ಹಿಂದಿನಂತೆೆುಂ ತೈವಾನ್ ಆಡಳಿತಗಾರರನ್ನು ಬೆದರಿಸಿ ತನ್ನ ವ್ಯಾಪ್ತಿಯಿಂದ ಹೊರಹೋಗದಂತೆ ಹಿಡಿತದಲ್ಲಿಟ್ಟುಕೊಳ್ಳವುದು ಚೀನಾದ ಉದ್ದೇಶ ಇರಬಹುದು. ಏಕ ಚೀನಾ ನೀತಿಗೆ ತಾನು ಬದ್ಧವಿರುವುದಾಗಿ ಅಮೆರಿಕ ಹೇಳುತ್ತಲೇ ಬಂದಿದೆ. ತೈವಾನನ್ನು ಪ್ರತ್ಯೇಕ ದೇಶವೆಂದೇನೂ ಅಮೆರಿಕ ಹೇಳುತ್ತಿಲ್ಲ. ಆದರೆ ತೈವಾನ್‌ನಲ್ಲಿ ಪ್ರಜಾತಂತ್ರ ವ್ಯವಸ್ಥೆ ಇರುವುದರಿಂದ ಅದಕ್ಕೆ ಬೆಂಬಲವಾಗಿ ನಿಲ್ಲುವುದಾಗಿ ಅಮೆರಿಕ ಹೇಳುತ್ತ ಬಂದಿದೆ. ತಾಯಿ ನಾಡಿನೊಂದಿಗೆ ತೈವಾನ್ ವಿಲೀನವಾಗುವುದು ಅನಿವಾರ್ಯ, ಶಾಂತಿಯ ಮಾರ್ಗದಲ್ಲಿ ಅದು ಸಾಧ್ಯವಾಗದಿದ್ದರೆ ಬಲಪ್ರೋಂಗದಿಂದ ಅದನ್ನು ಸಾಧಿಸಲಾಗುವುದು ಎಂದು ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಈಗಾಗಲೇ ಖಂಡತುಂಡವಾಗಿ ಹೇಳಿದ್ದಾರೆ. ತೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್ ವೆನ್ ಈ ಹೇಳಿಕೆಗೆ ಪ್ರತಿಭಟನೆ ವ್ಯಕ್ತಮಾಡಿ ‘‘ತೈವಾನ್ ಪ್ರತ್ಯೇಕ ದೇಶ. ವಿಲೀನ ಪ್ರಶ್ನೆ ಎದುರಾದರೆ ಅದನ್ನು ಜನರೇ ನಿರ್ಧರಿಸುತ್ತಾರೆ’’ ಎಂದು ಹೇಳಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯುಳ್ಳ ಪುಟ್ಟ ದ್ವೀಪ ತೈವಾನ್. ಈ ದ್ವೀಪ ಹಿಂದೆ ಚೀನಾದ ಭಾಗವಾಗಿತ್ತು. ಚೀನಾದಿಂದ ಪ್ರತ್ಯೇಕವಾದ ಮೇಲೆ ಇನ್ನೂ ಅದಕ್ಕೆ ಸ್ವತಂತ್ರ ದೇಶದ ಸ್ಥಾನ ಸಿಕ್ಕಿಲ್ಲ. ಇದಕ್ಕೆ ಕಾರಣ ಚೀನಾ. ಮೊದಲು ತಮ್ಮ ದೇಶದ ಭಾಗವಾಗಿದ್ದರಿಂದ ಅದು ತನಗೇ ಸೇರಬೇಕೆಂದು ಚೀನಾ ನಾಯಕರು ಹೇಳುತ್ತ ಬಂದಿದ್ದಾರೆ. ಮುಕ್ತ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯನ್ನು ಅನುಸರಿಸುವ ತೈವಾನ್, ಚೀನಾಕ್ಕೆ ಸೆಡ್ಡು ಹೊಡೆಯುವಂತೆ ಆರ್ಥಿಕವಾಗಿ ಬಲಾಢ್ಯವಾಗಿದೆ. ಅಷ್ಟೇ ಅಲ್ಲ ಆರ್ಥಿಕವಾಗಿ ಬಲಾಢ್ಯವಾಗಿರುವ ದೇಶಗಳ ಪೈಕಿ ತೈವಾನ್ ಕೂಡ ಒಂದಾಗಿದೆ. ಈ ದ್ವೀಪ ಶತಮಾನಗಳ ಕಾಲದಿಂದಲೂ ಚೀನಾದ ಭಾಗವಾಗಿತ್ತು. ೧೮ನೇ ಶತಮಾನದ ಕೊನೆಗೆ ನಡೆದ ಯುದ್ಧದಲ್ಲಿ ಸೋತ ಅಂದಿನ ಕ್ವಿಂಗ್ ಸರ್ಕಾರ ತೈವಾನ್ ದ್ವೀಪವನ್ನು ಜಪಾನ್‌ಗೆ ಬಿಟ್ಟುಕೊಟ್ಟಿತು. ಎರಡನೆಯ ಮಹಾಯುದ್ಧದಲ್ಲಿ ಸೋತ ಜಪಾನ್ ಆ ದ್ವೀಪವನ್ನು ಚೀನಾಕ್ಕೆ ಕೊಟ್ಟಿತು. ಚಿಯಾಂಗ್ ಕೈಶೇಖ್ ನೇತೃತ್ವದ ರಾಷ್ಟ್ರೀಯ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ ಮಾವೋತ್ಸೆ ತುಂಗ್ ನೇತೃತ್ವದಲ್ಲಿ ಕಮ್ಯುನಿಸ್ಟರು ಜಿಯಾಂಗ್ ಸರ್ಕಾರದ ನೀತಿಗಳನ್ನು ವಿರೋಧಿಸಲು ಆರಂಭಿಸಿದರು. ಅಂತಿಮವಾಗಿ ಕಮ್ಯುನಿಸ್ಟರು ಗೆರಿಲ್ಲಾ ಯುದ್ಧಕ್ಕಿಳಿದರು. ಈ ಯುದ್ಧದಲ್ಲಿ ಜಿಯಾಂಗ್ ಸರ್ಕಾರ ಸೋತಿತು. ಸೋತ ಜಿಯಾಂಗ್ ತನ್ನ ಬೆಂಬಲಿಗರೊಂದಿಗೆ ತೈವಾನ್ ದ್ವೀಪಕ್ಕೆ ಪಲಾಯನ ಮಾಡಿದರು. ಕ್ರಮೇಣ ತಮ್ಮ ಹಿಂದಿನ ಪಕ್ಷವಾದ ಕುಮಿಂಗ್ ಟಾಂಗ್ ಪಕ್ಷದ ನೇತೃತ್ವದ ಸರ್ಕಾರವನ್ನೂ ರಚಿಸಿದರು. ಅವರ ನಿಧನಾ ನಂತರ ಅಧಿಕಾರಕ್ಕೆ ಬಂದವರು ಪ್ರಜಾತಂತ್ರ ವ್ಯವಸ್ಥೆ ಸ್ಥಾಪಿಸಿದರು.
ಎಪ್ಪತ್ತರ ದಶಕದಲ್ಲಿ ತೈವಾನ್ ಕೈಗಾರಿಕೀಕರಣಕ್ಕೆ ತೆರೆದುಕೊಂಡು ಈಗ ಬೃಹತ್ ಶಕ್ತಿ ದ್ವೀಪವಾಗಿ ಬೆಳೆದಿದೆ. ಎಲೆಕ್ಟ್ರಾನಿಕ್, ಮಾಹಿತಿ ತಂತ್ರಜ್ಞಾನ, ಸಂಪರ್ಕ ತಂತ್ರಜ್ಞಾನ, ಆಟೋಮೊಬೈಲ್, ಮೊಬೈಲ್, ಚಿಪ್ಸ್, ಸೆಮಿಕಂಡಕ್ಟರುಗಳು… ಹೀಗೆ ಯಾವುದೇ ಆಧುನಿಕ ಉಪಕರಣದ ತಂತ್ರಜ್ಞಾನ ಮತ್ತು ಅವುಗಳ ಉತ್ಪಾದನೆಯಲ್ಲಿ ತೈವಾನ್ ಕ್ರಾಂತಿ ಮಾಡಿತು. ಈಗ ಕಮ್ಯುನಿಸ್ಟ್ ಚೀನಾ ಕೂಡ ಬಂಡವಾಳಶಾಹಿ ದೇಶಗಳ ಮುಕ್ತ ಮಾರುಕಟ್ಟೆ ತತ್ವಗಳನ್ನು ಅಳವಡಿಸಿಕೊಂಡು ಬೃಹತ್ ಆರ್ಥಿಕ ಶಕ್ತಿದೇಶವಾಗಿ ಬೆಳೆದಿದೆ. ತೈವಾನ್ ದ್ವೀಪವನ್ನು ವಿಲೀನ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ವಿಶ್ವದಲ್ಲಿ ತಮ್ಮ ದೇಶವನ್ನು ಮೀರಿಸುವ ಮತ್ತೊಂದು ದೇಶ ಇರುವುದಿಲ್ಲ ಎಂದು ಚೀನಾ ನಾಯಕರು ಭಾವಿಸಿದ್ದಾರೆ. ಹೀಗಾಗಿೆುೀಂ ತೈವಾನ್‌ಗಾಗಿ ಮಿಲಿಟರಿ ಅತಿಕ್ರಮಣ ಮಾಡಲೂ ಚೀನಾ ಹಿಂಜರಿಯದು.