Mysore
24
overcast clouds

Social Media

ಬುಧವಾರ, 01 ಜುಲೈ 2026
Light
Dark

‘ಭಿಕ್ಷೆ ಕೊಡಬೇಡಿ, ಭಿಕ್ಷುಕರ ಹೆಸರಲ್ಲಿ ಹೂಡಿಕೆ ಮಾಡಿ’

  ಭಿಕ್ಷುಕರು ಕೈಯೊಡ್ಡಿ ಬೇಡುವುದುಜನ ಅವರಿಗೆ ಭಿಕ್ಷೆ ನೀಡುವುದು ಭಾರತದ ಮೂಲೆ ಮೂಲೆಗಳಲ್ಲೂ ಕಾಣಬರುವ ಒಂದು ಸಾಮಾನ್ಯ ದೃಶ್ಯಭಾರತದಲ್ಲಿ ಸುಮಾರು ನಾಲ್ಕು ಲಕ್ಷದಷ್ಟಿರುವ ಭಿಕ್ಷುಕರು ಪ್ರತಿ ವರ್ಷ ಸುಮಾರು 34,000 ಕೋಟಿ ರೂಪಾಯಿಯ ಭಿಕ್ಷೆ ಪಡೆಯುತ್ತಾರೆ ಎಂದು ಒಂದು ಅಂಕಿಅಂಶ ಹೇಳುತ್ತದೆಹೀಗೆ ಭಿಕ್ಷೆ ನೀಡುವಾಗ ತಾವು ನೀಡುವ ಭಿಕ್ಷೆ ಭಿಕ್ಷುಕರ ಬದುಕನ್ನು ಉತ್ತಮಗೊಳಿಸುವುದೇಅವರನ್ನು ಭಿಕ್ಷಾಟನೆಯಂತಹ ದೈನೇಸಿ ಪರಿಸ್ಥಿತಿಯಿಂದ ಮೇಲೆತ್ತುವುದೇಎಂದು ಆಲೋಚಿಸುವವರು ತೀರಾ ವಿರಳಒಂದು ವೇಳೆಭಿಕ್ಷುಕರಿಗೆ ಹೀಗೆ ಹಣ ನೀಡುವ ಬದಲಿಗೆ ಆ ಹಣವನ್ನು ಅದೇ ಭಿಕ್ಷುಕರ ಹೆಸರಲ್ಲಿ ಒಂದೆಡೆ ಹೂಡಿಕೆ ಮಾಡಲು ಸಾಧ್ಯವಾದರೆ ಅದರಿಂದ ಭಿಕ್ಷುಕರಿಗೆ ಹೆಚ್ಚಿನ ಸಹಾಯ ಸಾಧ್ಯವಲ್ಲವೇ?

ಈಗ ಸಾಮಾಜಿಕ ಕಾರ್ಯಕರ್ತರಾಗಿ ಬದಲಾಗಿರುವ ಒಡಿಶಾದ 59 ವರ್ಷ ಪ್ರಾಯದ ಚಂದ್ರ ಮಿಶ್ರಾ ಎಂಬ ಮಾಜಿ ಪತ್ರಕರ್ತರು ಇದೇ ಉದ್ದೇಶದಿಂದ ‘ ಬೆಗ್ಗರ‍್ಸ್    ಕಾರ್ಪೊರೇಷನ್’ ಎಂಬ ಒಂದು ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆಚಂದ್ರ ಮಿಶ್ರಾ ಪತ್ರಕರ್ತರಾಗಿದ್ದಾಗ ಮಾನವೀಯ ವಿಷಯಗಳು ಹಾಗೂ ಉದ್ಯೋಗ ವಿಷಯಗಳ ಬಗ್ಗೆ ಬರೆಯುತ್ತಿದ್ದರುಒಡಿಶಾಬಿಹಾರಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳ ಸರ್ಕಾರಗಳೊಂದಿಗೆ ಔದ್ಯೋಗಿಕ ಪಾಲಿಸಿಗಳ ಬಗ್ಗೆ ಕೆಲಸ ಮಾಡಿದ ಅನುಭವವುಳ್ಳವರುಇವರು ಭಿಕ್ಷುಕರಿಗೆ ಸಹಾಯ ಮಾಡಲು ಇಚ್ಛಿಸುವವರು 10 ರೂಪಾಯಿಗಳಿಂದ 10000 ರೂಪಾಯಿಗಳ ತನಕ ಅದರಲ್ಲಿ ಹೂಡಿಕೆ ಮಾಡಬಹುದು. ‘ಬೆಗ್ಗರ‍್ಸ್ ಕಾರ್ಪೊರೇಷನ್’ ಸಂಸ್ಥೆಯನ್ನು ಹುಟ್ಟು ಹಾಕಿದ 16 ತಿಂಗಳೊಳಗೆಅದರಲ್ಲಿ ಹೂಡಿಕೆ ಮಾಡಿದವರಿಗೆ ಅವರ ಮೂಲ ಹಣಕ್ಕೆ ಶೇ.16.5 ಲಾಭಾಂಶವನ್ನು ಸೇರಿಸಿ ಅವರಿಗೆ ವಾಪಸ್ ಮಾಡಿದ್ದಾರೆ! ‘ನಾವು ಹೂಡಿಕೆಯನ್ನು ನಿರೀಕ್ಷಿಸುತ್ತೇವೆಯೇ ವಿನಾ ಭಿಕ್ಷೆ ಅಥವಾ ದೇಣಿಗೆಯನ್ನಲ್ಲ’ ಎಂದು ಮಿಶ್ರಾ ನೇರವಾಗಿ ಹೇಳುತ್ತಾರೆ.

ಚಂದ್ರ ಮಿಶ್ರಾ ಯಾವುದೋ ಕಾರ್ಯನಿಮಿತ್ತ ಗುಜರಾತಿಗೆ ಹೋಗಿದ್ದಾಗ ಅಲ್ಲಿನ ದೇವಸ್ಥಾನಗಳ ಎದುರು ಸಾಲುಗಟ್ಟಿ ನಿಂತ ಭಿಕ್ಷುಕರನ್ನು ನೋಡಿಇವರು ಹೀಗೆ ಬೇಡುವ ಬದಲು ಅವರಿಗೆ ತರಬೇತಿ ನೀಡಿ ಏನಾದರೂ ಉದ್ಯೋಗ ಮಾಡಲು ತಯಾರು ಮಾಡಿದರೆ ಅವರ ಈ ದೈನೇಸಿ ಸ್ಥಿತಿಯನ್ನು ಬದಲಾಯಿಸಬಹುದಲ್ಲವೆ ಎಂದು ಆಲೋಚಿಸಿ ಆ ನಿಟ್ಟಿನಲ್ಲಿ ಮುಂದುವರಿಯುತ್ತಾರೆಚಂದ್ರ ಮಿಶ್ರಾ ಕೆಲವು ರಾಜ್ಯಗಳಲ್ಲಿ ಅಲ್ಲಿನ ಔದ್ಯೋಗಿಕ ಪಾಲಿಸಿಗಳನ್ನು ಅಧ್ಯಯನ ಮಾಡಿದ ಅನುಭವ ಉಳ್ಳವರುಅವರು 2020ರ ಡಿಸೆಂಬರ್ ತಿಂಗಳ 31ರಂದು ವಾರಣಾಸಿಗೆ ಹೋಗುತ್ತಾರೆಅಲ್ಲಿ ಚಟುವಟಿಕೆ ನಡೆಸುತ್ತಿರುವ ‘ಜನಮಿತ್ರ ನ್ಯಾಸ್’ ಎಂಬ ಸ್ಥಳೀಯ ಸರ್ಕಾರೇತರ ಸಂಸ್ಥೆಯನ್ನು ಸಂಪರ್ಕಿಸಿಭಿಕ್ಷುಕರಿಗೆ ಉದ್ಯೋಗ ಸೃಷ್ಟಿಸುವ ತನ್ನ ಆಲೋಚನೆಯನ್ನು ವಿವರಿಸುತ್ತಾರೆವಾರಣಾಸಿಯ ಘಾಟ್‌ಗಳಲ್ಲಿ ಭಿಕ್ಷುಕರಿಗೇನೂ ಕೊರತೆ ಇಲ್ಲಯಾವ ದೇವಸ್ಥಾನದೆದುರು ನೋಡಿದರೂ ಅಲ್ಲಿ ಉದ್ದನೆಯೆ ಭಿಕ್ಷುಕರ ಸಾಲು ನಿಂತಿರುತ್ತದೆಚಂದ್ರ ಮಿಶ್ರಾ ಸ್ಥಳೀಯ ಭಿಕ್ಷುಕರ ನಿಕಟ ಸಂಪರ್ಕ ಗಳಿಸಿಅವರ ಜೀವನ ಕ್ರಮವನ್ನು ಸೂಕ್ಷ ವಾಗಿ ಅಭ್ಯಸಿಸುತ್ತಾರೆಹಾಗೂತನ್ನ ಯೋಜನೆಯನ್ನು ಅವರಿಗೆ ಮನದಟ್ಟು ಮಾಡುತ್ತಾರೆಆದರೆಒಬ್ಬನೇ ಒಬ್ಬ ಭಿಕ್ಷುಕನಾಗಲೀಭಿಕ್ಷುಕಿಯಾಗಲೀ ಮಿಶ್ರಾರೊಂದಿಗೆ ಕೆಲಸ ಮಾಡಲು ಮುಂದೆ ಬರುವುದಿಲ್ಲ.

2021ರಲ್ಲಿಎರಡನೇ ಬಾರಿಗೆ ಕೋವಿಡ್ ಲಾಕ್‌ಡೌನ್ ಹೇರಲ್ಪಟ್ಟಾಗ ಅನೇಕ ಭಿಕ್ಷುಕರು ಸಹಾಯಕ್ಕಾಗಿ ಚಂದ್ರ ಮಿಶ್ರಾರನ್ನು ಸಂಪರ್ಕಿಸಿದರುಆಗಚಂದ್ರ ಮಿಶ್ರಾಬದ್ರಿನಾಥ್ ಮಿಶ್ರಾ ಮತ್ತು ದೇವೇಂದ್ರ ಥಾಪಾ ಎಂಬ ತಮ್ಮಿಬ್ಬರು ಸ್ನೇಹಿತರನ್ನು ಜೊತೆಗಿರಿಸಿಕೊಂಡು, 2021ರ ಆಗಸ್ಟ್ ತಿಂಗಳಲ್ಲಿ ‘ಬೆಗ್ಗರ‍್ಸ್ ಕಾರ್ಪೊರೇಷನ್’ನ್ನು ಹುಟ್ಟು ಹಾಕಿದರುಅದನ್ನು ಅವರು ಒಂದು ‘ಪ್ರಾಫಿಟ್ ಮೇಕಿಂಗ್ ಕಂಪೆನಿ’ ಅಂತಲೇ ರಿಜಸ್ಟ್ರಿಗೊಳಿಸಿದ್ದಾರೆಏಕೆಂದರೆಲಾಭ ಮಾಡಿದರಷ್ಟೇ ಹಣ ಹೂಡಿದವರಿಗೆ ಲಾಭಾಂಶ ತಂದು ಕೊಡಲು ಸಾಧ್ಯವಾರಣಾಸಿಯ ಘಾಟ್‌ನಲ್ಲಿ ತನ್ನ ಮಗುವಿನೊಂದಿಗೆ ಭಿಕ್ಷಾಟನೆ ನಡೆಸುತ್ತಿದ್ದ ಒಬ್ಬಳು ಭಿಕ್ಷುಕಿ ಮಿಶ್ರಾರ ‘ಬೆಗ್ಗರ‍್ಸ್ ಕಾರ್ಪೊರೇಷನ್’ ಸೇರಿದ ಪ್ರಪ್ರಥಮಳುಅವಳ ಗಂಡ ಬೇರೊಬ್ಬಳನ್ನು ಮದುವೆಯಾಗಲು ಇವಳನ್ನು ಮನೆಯಿಂದ ಹೊರ ಹಾಕಿದ್ದ ಅವಳಿಗೆ ಬೇರಾವ ನೆಲೆಯೂ ಇರಲಿಲ್ಲವಾದ ಕಾರಣ ತನ್ನ 12 ವರ್ಷದ ಮಗನೊಂದಿಗೆ ಸಹಾಯ ಯಾಚಿಸಿ ಮಿಶ್ರಾರ ಬಳಿ ಬಂದಳುಮಿಶ್ರಾ ಅವಳಿಗೆ ಚೀಲ ತಯಾರಿಸುವ ತರಬೇತಿ ನೀಡಿಅವಳನ್ನು ಸ್ವಂತ ಉದ್ಯೋಗಕ್ಕೆ ತಯಾರು ಮಾಡಿದರುಆಕೆ ತಯಾರಿಸಿದ ಚೀಲಗಳನ್ನು ಮಿಶ್ರಾ ವಿವಿಧೆಡೆಯಲ್ಲಿ ನಡೆಯುವ ಕಾನ್ಛರೆನ್ಸ್‌ಗಳಿಗೆ ಕೊಂಡೊಯ್ದುಮಾರಿಆಕೆಗೆ ಸಂಪಾದನೆಗೆ ದಾರಿ ಮಾಡಿಕೊಟ್ಟರುಅದನ್ನು ನೋಡಿ ಇನ್ನು ಕೆಲವರು ಭಿಕ್ಷುಕರು ಮಿಶ್ರಾರ ‘ಬೆಗ್ಗರ‍್ಸ್ ಕಾರ್ಪೊರೇಷನ್’ ಸೇರಿದರುಚಂದ್ರ ಮಿಶ್ರಾ ಈವರೆಗೆ 14 ಭಿಕ್ಷುಕ ಕುಟುಂಬಗಳನ್ನು ಹೀಗೆ ಸಣ್ಣ ಪ್ರಮಾಣದ ಉದ್ಯಮಿಗಳನ್ನಾಗಿ ಪರಿವರ್ತಿಸಿದ್ದಾರೆಈಗ ಒಂದು ಡಜನ್ನಿಗೂ ಹೆಚ್ಚು ಭಿಕ್ಷುಕ ಕುಟುಂಬಗಳು ಅವರೊಂದಿಗೆ ಸೇರಿಲ್ಯಾಪ್‌ಟಾಪ್ ಬ್ಯಾಗ್ಶಾಪಿಂಗ್ ಬ್ಯಾಗ್ಕಾನ್ಛರೆನ್ಸ್ ಬ್ಯಾಗ್ ಮೊದಲಾದ ಚೀಲಗಳನ್ನು ತಯಾರಿಸುವ ಉದ್ಯೋಗ ಮಾಡುತ್ತಿವೆಚಂದ್ರ ಮಿಶ್ರಾ ಆ ಚೀಲಗಳನ್ನು ಹೋಟೆಲ್ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರುತ್ತಾರೆಎರಡು ಭಿಕ್ಷುಕ ಕುಟುಂಬಗಳವರು ದೇವಸ್ಥಾನಗಳ ಬಳಿ ದೇವತಾಕಾರ್ಯಗಳಿಗೆ ಬೇಕಾಗುವ ಹೂಹಣ್ಣು ಕಾಯಿ ಮೊದಲಾದ ವಸ್ತುಗಳನ್ನು ಮಾರುವ ಸ್ವಂತ ಅಂಗಡಿಗಳನ್ನು ನಡೆಸುತ್ತಿದ್ದಾರೆ.

ಚಂದ್ರ ಮಿಶ್ರಾಕೇವಲ ಹತ್ತು ರೂಪಾಯಿಯಿಂದ ಹತ್ತು ಸಾವಿರ ರೂಪಾಯಿಗಳ ತನಕ ಎಷ್ಟು ಸಾಧ್ಯವೋ ಅಷ್ಟು ಮೊತ್ತವನ್ನು ‘ಬೆಗ್ಗರ‍್ಸ್ ಕಾರ್ಪೊರೇಷನ್’ನಲ್ಲಿ ಹೂಡಿಕೆ ಮಾಡುವಂತೆ ಜನರನ್ನು ಕೇಳಿಕೊಂಡ ಕಾರಣ ಪ್ರಾರಂಭದಲ್ಲಿ 57 ಜನ ವಿವಿಧ ಮೊತ್ತದ ಹೂಡಿಕೆ ಮಾಡಿದರುಮೊತ್ತ ಮೊದಲ ಹೂಡಿಕೆ ಬಂದುದು ಛತ್ತೀಸ್‌ಗಢದ ಒಬ್ಬ ಎಂಜಿನಿಯರಿಂದಆ ಹಣವನ್ನು ಬಳಸಿ ಮಿಶ್ರಾ ಭಿಕ್ಷುಕರಿಗೆ ಔದ್ಯೋಗಿಕ ತರಬೇತಿ ನೀಡಿದರುಅವರ ಕಾರ್ಯವ್ಯಾಪ್ತಿ ವಿಸ್ತಾರಗೊಂಡಂತೆಅವರ ‘ಬೆಗ್ಗರ‍್ಸ್ ಕಾರ್ಪೊರೇಷನ್’ ಕಂಪೆನಿ 16 ಅಗ್ರಗಣ್ಯ ‘ಮೈಂಡ್‌ಫುಲ್’ ಸ್ಟಾರ್ಟ್ ಅಪ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತುಅದು ಮಿಶ್ರಾರ ಕೆಲಸಕ್ಕೆ ಬಹಳ ದೊಡ್ಡ ಒತ್ತು ನೀಡಿತು. 2021-22ರಲ್ಲಿ ‘ಬೆಗ್ಗರ‍್ಸ್ ಕಾರ್ಪೊರೇಷನ್’ನಲ್ಲಿ ಹೂಡಿಕೆಯಾದ ಒಟ್ಟು ಮೊತ್ತ 5.7 ಲಕ್ಷ ರೂಪಾಯಿ. 2022-23ರಲ್ಲಿ ‘ಬೆಗ್ಗರ‍್ಸ್ ಕಾರ್ಪೊರೇಷನ್’ 57 ಲಕ್ಷ ರೂಪಾಯಿಯನ್ನು ಸಂಪಾದಿಸಿಚಂದ್ರ ಮಿಶ್ರಾ ಹೂಡಿಕೆದಾರರಿಗೆ ಅವರ ಹಣವನ್ನು ಶೇ.16.5 ಬಡ್ಡಿಯೊಂದಿಗೆ ಹಿಂತಿರುಗಿಸಿದರು.

 

ಚಂದ್ರ ಮಿಶ್ರಾರ ಪ್ರಕಾರಒಬ್ಬ ಭಿಕ್ಷುಕನಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒಂದೂವರೆ ಲಕ್ಷ ರೂಪಾಯಿ ಸಾಕಾಗುತ್ತದೆಇದರಲ್ಲಿ 50,000 ರೂಪಾಯಿ ಔದ್ಯೋಗಿಕ ತರಬೇತಿ ನೀಡಲು ಖರ್ಚಾದರೆಉಳಿದ ಒಂದು ಲಕ್ಷ ಹೊಸ ಉದ್ಯೋಗ ಶುರು ಮಾಡಲು ತಗಲುತ್ತದೆಚಂದ್ರ ಮಿಶ್ರಾ ವಯಸ್ಕ ಭಿಕ್ಷುಕರಿಗೆ ‘ಬೆಗ್ಗರ‍್ಸ್ ಕಾರ್ಪೊರೇಷನ್’ ಶುರು ಮಾಡುವ ಜೊತೆಯಲ್ಲಿ ಭಿಕ್ಷುಕ ಮಕ್ಕಳಿಗಾಗಿ ‘ಸ್ಕೂಲ್ ಲೈಫ್’ನ್ನು ಹುಟ್ಟು ಹಾಕಿದ್ದಾರೆಹರಿಯಾಣದ ಗುರುಗ್ರಾಮ್‌ನಲ್ಲಿ ‘ಚಾಯ್ ಓಮ್’ ಎಂಬ ಹೆಸರಿನ ಚಹಾ ಕಂಪೆನಿಯನ್ನು ನಡೆಸುತ್ತಿರುವ ಪಾಯಲ್ ಅಗವಾಲ್ ಎಂಬವರು ಚಂದ್ರ ಮಿಶ್ರಾರ ಜೊತೆ ಒಂದು ಬಿಸಿನೆಸ್ ಡೀಲ್ ಮಾಡಿಕೊಂಡು೫ ಲಕ್ಷ ರೂಪಾಯಿ ಹೂಡಿಕೆ ಮಾಡಿಪರಿವರ್ತಿತ ಭಿಕ್ಷುಕರಿಗೆ ಉದ್ಯೋಗ ನೀಡಲು ಒಂದು ‘ಟೀ ಕೆಫೆ’ಯನ್ನು ಪ್ರಾರಂಭಿಸಿದ್ದಾರೆತನ್ನ ವಿನೂತನ ಕೆಲಸಕ್ಕಾಗಿ ‘ಬೆಗ್ಗರ‍್ಸ್ ಕಾರ್ಪೊರೇಷನ್’ ಹಲವು ಪ್ರಶಸ್ತಿಗಳನ್ನು ಪಡೆದಿದೆಅವುಗಳಲ್ಲಿ ‘ಬೆಸ್ಟ್ ಸೋಷಿಯಲ್ ಇಂಪ್ಯಾಕ್ಟ್ ಅವಾರ್ಡ್’ ಒಂದು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!