Mysore
23
overcast clouds
Light
Dark

ರಾಜ್ಯ ಸರ್ಕಾರಕ್ಕೆ ಆರು ತಿಂಗಳು; ಸವಾಲುಗಳ ನಡುವೆಯೂ ಸರ್ಕಾರ ದಿಟ್ಟ ನಿಲುವು

By: ಡಾ.ಶ್ವೇತಾ ಮಡಪ್ಪಾಡಿ

ಬಹುಜನರು ತಮ್ಮ ಅಪೇಕ್ಷೆಯಂತೆ ಕಾಂಗ್ರೆಸ್ ಸರ್ಕಾರವನ್ನು ಜಾರಿಗೆ ತಂದು ಆರು ತಿಂಗಳುಗಳು ಪೂರೈಸಿದವು. ಈ ಹಿನ್ನೆಲೆಯಲ್ಲಿ ಸರ್ಕಾರದ ಯಶಸ್ವೀ ಕಾರ್ಯ ಯೋಜನೆಗಳನ್ನು ಅವಲೋಕಿಸಿದಾಗ ಸರ್ಕಾರವು ತನಗಿದ್ದ ಸವಾಲುಗಳ ನಡುವೆಯೂ ತಾನು ನಿರ್ವಹಿ ಸಿದ ದಿಟ್ಟ ಜವಾಬ್ದಾರಿಗಳನ್ನು ಕುರಿತು ಮನವರಿಕೆಯಾಗುತ್ತದೆ.

ಆರು ತಿಂಗಳ ಹಿಂದೆಯಷ್ಟೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಗ್ಯಾರಂಟಿಗಳಲ್ಲಿ ನಾಲ್ಕನ್ನೂ ಇದೀಗ ಚಾಲ್ತಿಗೆ ತಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲ ವರು ಸರ್ಕಾರದ ಐದು ಯೋಜನೆಗಳಿಂದ ರಾಜ್ಯ ಸರ್ವ ನಾಶ ಆಯಿತೆಂದು ಬೊಬ್ಬಿರಿಯುತ್ತಿರುವಾಗ ಹೀಗೆ ನಾವೆಲ್ಲರೂ ತಣ್ಣಗೆ ಕುಳಿತು ಯೋಚಿಸುವುದು ಬಹಳ ಅಗತ್ಯ.

ನಮಗೆಲ್ಲ ಈಗಾಗಲೇ ತಿಳಿದಿರುವಂತೆ, ರಾಜ್ಯ ಸರ್ಕಾರವು ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆಗಳನ್ನು ಅನುಷ್ಠಾನಗೊಳಿ ಸಿದೆ.ಪ್ರಸ್ತುತ ಆರ್ಥಿಕ ವರ್ಷದಲ್ಲಿ ಈ ಯೋಜನೆಗಳನ್ನು ಜಾರಿಗೆ ತರಲು ಬೇಕಾದಷ್ಟು ಅನುದಾನ ತೆಗೆದಿರಿಸುವು ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು. ಹೋರಾಟದಿಂದ ಪಡೆದ ರಾಜ್ಯಾಧಿಕಾರ ವನ್ನು ಜನರ ಕಲ್ಯಾಣಕ್ಕೆ ಬಳಸುತ್ತಿರುವ ಅವರಿಗೆ ಸಮಾಜವಾದಿ ಚಳವಳಿಯ ಹಿನ್ನೆಲೆಯಿದೆ. ಹಿಂದುಳಿದ ವರ್ಗಗಳ ಬಗ್ಗೆ ಅನುಭವಾಧಾರಿತ ಮತ್ತು ಅಧ್ಯಯನಾಧಾರಿತ ತಿಳಿವಳಿಕೆಯಿದೆ.

ಈ ಯೋಜನೆಗಳನ್ನು ವಿರೋಧಿಸುವವರೂ ಅಭಿವೃದ್ಧಿ, ಆರ್ಥಿಕತೆ ಮೊದಲಾದ ಪರಿಭಾಷೆ ಗಳಲ್ಲಿಯೇ ಮಾತಾಡುತ್ತಿದ್ದಾರೆ. ಸಾರ್ವಜನಿಕ ಪರಿಭಾಷೆ ಯನ್ನು ಬದಲಾಯಿಸಿದ್ದು ಕೂಡ ಈ ಯೋಜನೆಗಳ ಬಹುದೊಡ್ಡ ಯಶಸ್ಸು.
ಈ ಆರು ತಿಂಗಳ ಅವಧಿಯಲ್ಲಿ ಯೋಜನೆಗಳು ಯಾವ ಪರಿಣಾಮ ಬೀರಿವೆ? ಸರ್ಕಾರದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದೆಲ್ಲ ವಿಶ್ಲೇಷಿಸುವುದು ಅಗತ್ಯವೇ ಹೌದು.

ಈ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿರುವವರು ಮತ್ತು ಯೋಜನೆಗಳ ಬಗ್ಗೆ ಕೆಟ್ಟದಾಗಿ ಮಾತನಾಡು ವವರು ಯಾರೂ ಆರ್ಥಿಕ ತಜ್ಞರಲ್ಲ. ಹಾಗಾಗಿ ಅವರ ಮಾತನ್ನು ನಾವು ಗಂಭೀರವಾಗಿ ಸ್ವೀಕರಿಸಬೇಕಾದ ಅಗತ್ಯವೂ ಇಲ್ಲ. ಶಕ್ತಿಯೋಜನೆಯು ಬೀರಿದಪರಿಣಾಮ ನಿರ್ಣಾಯಕವಾದುದು. ಹಿಂದೆಂದೂ ಇಲ್ಲದ ರೀತಿ ಯಲ್ಲಿ ಮಹಿಳೆಯರು ಪಯಣಿಸುತ್ತಿದ್ದಾರೆ. ಕಾರಣಗಳು ಏನೇ ಇರಲಿ, ಮಹಿಳೆಯರ ಈ ಚಲನೆ ಮಾತ್ರ ಐತಿಹಾಸಿಕವಾದುದು. ಇದನ್ನು ಅರ್ಥಮಾಡಿ ಕೊಳ್ಳು ವುದಕ್ಕೆ ಹೃದಯವಂತಿಕೆ ಬೇಕು. ಬಡವರ ಹಸಿವನ್ನು ಅನ್ನಭಾಗ್ಯ ಯೋಜನೆಯನ್ನು ತಪ್ಪು ತಣಿಸುವ ಎಂದು ಹೇಳಲು ಯಾರಿಗೂ ಅಧಿಕಾರ ಇಲ್ಲ.

ತಿಂಗಳ ಎರಡು ಸಾವಿರ ರೂಪಾಯಿಗಳು ಹೆಣ್ಣನ್ನು ಆರ್ಥಿಕವಾಗಿ ಇನ್ನಷ್ಟು ಸ್ವಾವ ಲಂಬಿಯನ್ನಾಗಿಸುತ್ತಿದೆ ಎನ್ನುವು ದರಲ್ಲಿ ಎರಡು ಮಾತಿಲ್ಲ. ಯೋಜನೆಗಳ ದುರ್ಬಳಕೆ ಆಗದಂತೆ ಈ ನಾವೆಲ್ಲ ಎಚ್ಚರಿಕೆ ವಹಿಸಬೇಕು ಅಷ್ಟೆ. ಹಿಂದೆ ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ನೋಟ ಬಡತನ ಅಜ್ಞಾನ ಮತ್ತು ಅನಾ ರೋಗ್ಯವು ಮಾಯವಾಗು ವಂತೆ ಪ್ರತಿಯೊಬ್ಬರೂ ಕೆಲಸ ಮಾಡಬೇಕೆಂದು ದೇಶದ ಜನತೆಯನ್ನು ಕೋರಿದ್ದರು.

ಬಹಳ ಕಾಲದಿಂದಲೂ ನಮ್ಮಲ್ಲಿ ಕಲ್ಯಾಣ ರಾಜ್ಯದ ಕಲ್ಪನೆ ಇತ್ತು. ಈ ಹಿನ್ನೆಲೆಯಲ್ಲಿ ಜನರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಸರ್ಕಾರವು ತನ್ನ ಸಂಪತ್ತನ್ನು (ಜನಗಳದ್ದೇ ಆದ ಸಂಪತ್ತನ್ನು) ಎಲ್ಲರಿಗೂ ಸಮಾನ ಅವಕಾಶ ಮತ್ತು ಸಂಪತ್ತಿನ ಸಮಾನ ಹಂಚಿಕೆ ಎಂಬ ಎರಡು ತತ್ವಗಳ ಆಧಾರದ ಮೇಲೆ ಜನರಿಗೆ ಹಂಚುತ್ತದೆ. ಆ ಮೂಲಕ ಪ್ರಜೆಗಳ ಆರ್ಥಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ರಕ್ಷಿಸುವ ಹೊಣೆಯನ್ನು ಹೊತ್ತುಕೊಳ್ಳುತ್ತದೆ. ಪ್ರಸ್ತುತ ಕರ್ನಾಟಕ ಯೋಜನೆಗಳು ಕಲ್ಯಾಣ ರಾಜ್ಯದ ಪರಿಕಲ್ಪನೆಯಂತೆ ನಮ್ಮ ಮುಂದಿವೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ