Mysore
29
overcast clouds

Social Media

ಬುಧವಾರ, 17 ಜೂನ್ 2026
Light
Dark

ಆಂದೋಲನ ಓದುಗರ ಪತ್ರ: 29 ಭಾನುವಾರ 2023

ಅಧಿಕಾರ ಬಯಸುವ ಪಕ್ಷಗಳು ಉದ್ಯೋಗದ ಭರವಸೆ ನೀಡಲಿ

ಕರ್ನಾಟಕದಲ್ಲೀಗ 2022ರ ಚುನಾವಣೆ ಸಂದರ್ಭ. ಚುನಾವಣೆ ಸಮೀಪಸುತ್ತಿದ್ದಂತೆ ಎಲ್ಲ ರಾಜಕೀಯ ಪಕ್ಷಗಳವರೂ ತಂತಮ್ಮ ಪಕ್ಷಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಭರವಸೆಗಳನ್ನು ನೀಡುತ್ತಿದ್ದಾರೆ. ಒಂದು ಪಕ್ಷ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಮಹಿಳಾ ಯಜಮಾನಿಗೆ ಮಾಸಿಕ 2,000 ರೂ., 1೦ ಕೆ.ಜಿ. ಅಕ್ಕಿ ಕೊಡುವ ಭರವಸೆ ನೀಡಿದರೆ, ಮತ್ತೊಂದು ಪಕ್ಷದವರು ‘ಲವ್ ಜಿಹಾದ್’, ‘ಆಜಾನ್, ‘ಹಿಜಾಬ್’, ‘ಹಲಾಲ್’ ಇಲ್ಲವಾಗಿಸಿ ‘ಹಿಂದುತ್ವ’ ಸ್ಥಾಪಿಸುತ್ತೇವೆ ಎನ್ನುತ್ತಾರೆ. ಮತ್ತೊಂದು ಪಕ್ಷದವರು ಜಲಧಾರೆ, ಪಂಚ ರತ್ನ ಯಾತ್ರೆ ಎನ್ನುತ್ತಾ ಮತದಾರರ ಮನ ಮುಟ್ಟಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಮೂರೂ ಪಕ್ಷಗಳಲ್ಲಿ ಯಾವ ಪಕ್ಷದವರೂ ನಾವು ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಕುಟುಂಬದ ಯುವಕ, ಯುವತಿಯರಿಗೆ ಅವರ ಅರ್ಹತೆಗೆ ತಕ್ಕಂತೆ ಸರ್ಕಾರಿ ನೌಕರಿಯನ್ನು ನೀಡುತ್ತೇವೆ ಎಂದು ಏಕೆ ಹೇಳುವುದಿಲ್ಲ? ಯುವ ಜನತೆಗೆ ಉದ್ಯೋಗ ನೀಡಿದರೆ ಅಽಕಾರಕ್ಕೆ ಬರುವ ಯಾವ ಸರ್ಕಾರವೂ ಯಾವ ಸೌಲಭ್ಯವನ್ನೂ ಉಚಿತವಾಗಿ ನೀಡುವ ಅನಿರ್ವಾತೆಯೇ ಇರುವುದಿಲ್ಲ. ಉದ್ಯೋಗ ನೀಡಿದರೆ ಸಾಕು ಯುವಜನತೆ ಉತ್ತಮ ಜೀವನವನ್ನು ಕಟ್ಟಿಕೊಳ್ಳುತ್ತಾರೆ. ಆ ಸಾಮರ್ಥ್ಯವನ್ನು ಅವರು ಹೊಂದುತ್ತಾರೆ. ಆದ್ದರಿಂದ ಸ್ವಾವಲಂಬ ನೆಯ, ಸ್ವಾಭಿಮಾನದ ಬದುಕನ್ನು ನೀಡುವಲ್ಲಿ ರಾಜಕೀಯ ಪಕ್ಷಗಳು ಮುಂದಾಗಬೇಕು. ತಾತ್ಕಾಲಿಕ ಬದಲಾವಣೆಗಳ ಬದಲು ಶಾಶ್ವತ ಪರಿಹಾರವನ್ನು ನೀಡುವ ಮೂಲಕ ಜನರ ಬದುಕನ್ನು ಸುಧಾರಿಸ ಬೇಕು. ಇದಕ್ಕಾಗಿ ಉದ್ಯೋಗ ನೀಡುವ ಕಡೆ ಆಲೋಚಿಸಬೇಕಿದೆ.

ಮಾರುತಿ ನಡಿವಿಮನೆ, ಸಂಶೋಧನಾ ವಿದ್ಯಾರ್ಥಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!