Mysore
24
overcast clouds

Social Media

ಶುಕ್ರವಾರ, 18 ಏಪ್ರಿಲ 2025
Light
Dark

ಆಂದೋಲನ ಓದುಗರಪತ್ರ : 10 ಬುಧವಾರ 2022

ಆಟ-ಪಾಠ

ಮುಗಿಯಿತು ಕಾಮನ್ವೆಲ್ತ್ ಕ್ರೀಡಾಕೂಟ
ಇನ್ನೂ ಕಲಿಯಬೇಕಿದೆ ನಾವು ಪಾಠ
ಬರೋಬ್ಬರಿ ನಾವು ೧೪೦ ಕೋಟಿ !
ನಾಲ್ಕನೇ ಸ್ಥಾನ ತೋರುತ್ತಿದೆ
ನಮಗೆ ಪದಕಗಳ ಪಟ್ಟಿ!!

-ಮ ಗು ಬಸವಣ್ಣ, ಜೆಎಸ್‌ಎಸ್ ಸಂಸ್ಥೆ, ಸುತ್ತೂರು


ಉಚಿತ ಕೊಡುಗೆಗಳು ದೇಶಕ್ಕೆ ಮಾರಕ!

ಚುನಾವಣೆ ವೇಳೆಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ಘೋಷಣೆ ಮಾಡುವ ಉಚಿತ ಕೊಡುಗೆಗಳಿಂದ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಈ ಹಿಂದೆ ಒಂದೆರಡು ರಾಜ್ಯಗಳಿಗೆ ಸೀಮಿತವಾಗಿದ್ದ ಉಚಿತ ಕೊಡುಗೆ ಘೋಷಣೆಗಳು, ಈಗ ದೇಶಾದ್ಯಂತ ಮತದಾರರನ್ನು ಸೆಳೆಯುವ ಅಸ್ತ್ರಗಳಂತೆ ಬಳಕೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ರಾಜಕೀಯ ಪಕ್ಷಗಳು ಆದಾಯ ಹೆಚ್ಚಳ, ಆರ್ಥಿಕ ವೃದ್ಧಿ ಹಾಗೂ ಉದ್ಯೋಗಾವಕಾಶಗಳ ಸೃಷ್ಟಿಯ ಮೂಲಕ ದುಡಿಯುವ ವರ್ಗವನ್ನು ಸೃಷ್ಟಿಸಬೇಕೆ ಹೊರತು ಉಚಿತ ಘೋಷಣೆಗಳನ್ನು ಮಾಡಿ ರಾಜ್ಯಗಳ ಆರ್ಥಿಕತೆಯನ್ನು ಹದಗೆಡಿಸುವುದಲ್ಲ. ಈ ಸಂಬಂಧ ಸುಪ್ರೀಂಕೋರ್ಟ್ ತಜ್ಞರ ಸಮಿತಿ ರಚಿಸಲು ಮುಂದಾಗಿರುವುದು ಅತ್ಯಂತ ಪ್ರಶಂಸನೀಯ ಸಂಗತಿಯಾಗಿದೆ.

-ಹರಳಹಳ್ಳಿಪುಟ್ಟರಾಜು, ಪಾಂಡವಪುರ.


ಬಸ್ ವ್ಯವಸ್ಥೆ ಕಲ್ಪಿಸಿ

ಮೈಸೂರು ಜಿಲ್ಲೆ ಯ ಎಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದಿಂದ ಹುಣಸೂರು ತಾಲ್ಲೂಕು ಗದ್ದಿಗೆ ಹೋಗಲು ಬಸ್ಸಿನ ವ್ಯವಸ್ಥೆ ಸಮರ್ಪಕವಾಗಿಲ್ಲ . ಅಲ್ಲದೆ, ಗ್ರಾಮದಲ್ಲಿ ರುವ ಕೆಂಡಗಣ್ಣೇಶ್ವರ ದೇವಸ್ಥಾನ ಸಾರ್ವಜನಿಕರು ಪ್ರತಿದಿನ ಬರುತ್ತಾರೆ. ಈ ಊರಿನಿಂದ ಬೇರೆ ಊರುಗಳಲ್ಲಿರುವ ಶಾಲಾ ಕಾಲೇಜುಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹೋಗುತ್ತಾರೆ. ಆದರೆ, ಇವರೆಲ್ಲರಿಗೂ ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಕೆ ಆರ್ ಟಿ ಸಿ ಅಧಿಕಾರಿಗಳು ಮಾದಾಪುರ ಮಾರ್ಗವಾಗಿ ಮೈಸೂರು ಕಡೆಗೆ ಅಥವಾ ಮೈಸೂರಿನಿಂದ ಗದ್ದಿಗೆ ಮಾರ್ಗವಾಗಿ ಮಾದಾಪುರ ಗ್ರಾಮ ಸರ್ಕಲ್ ಮಾರ್ಗವಾಗಿ ಎಚ್.ಡಿ.ಕೋಟೆ ಕಡೆಗೆ ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೨ರವರೆಗೆ ಹಾಗೂ ಸಾಯಂಕಾಲ ೪ ಗಂಟೆಯ ವೇಳೆಗೆ ಕೆಎಸ್‌ಆರ್‌ಟಿಸಿ ಬಸ್ಸುಗಳು ಸಂಚರಿಸಲು ವ್ಯವಸ್ಥೆ ಮಾಡಬೇಕು.

-ಸಿದ್ದಲಿಂಗೆಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ.


ಪ್ರೊಫೈಲ್‌ನಲ್ಲಿ ಫೋಟೊ ಹಾಕಿಕೊಂಡರೆ ದೇಶಪ್ರೇಮವೇ?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ವಾರದ ‘ಮನದ ಮಾತು’ ಕಾರ್ಯಕ್ರಮದಲ್ಲಿ ೭೫ನೇ ಸ್ವಾತಂತ್ರೋತ್ಸವದ ನಿಮಿತ್ತ ಪ್ರತಿಯೊಬ್ಬರೂ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿನ ಪ್ರೊಫೈಲ್‌ಗಳಿಗೆ ತ್ರಿವರ್ಣ ಧ್ವಜವನ್ನು ಹಾಕಿಕೊಳ್ಳಬೇಕು ಎಂದು ಕರೆ ನೀಡಿರುವುದು ಮಕ್ಕಳಾಟದಂತೆ ಕಾಣುತ್ತಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂತೆ ಇದೂ ಕೂಡ ಕೆಲವು ದಿನಗಳ ನಾಟಕದಂತೆ ಕಾಣುತ್ತಿದೆ.

ಯೋಗದಿನದಂದು ಸೆಲ್ಫಿ ಕ್ಲಿಕ್ಕಿಸಿ ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡ ಮೋದಿ ಹಿಂಬಾಲಕರು ಬಿಸಾಕಿರುವ ಯೋಗದ ಮ್ಯಾಟನ್ನು ತೆಗೆಯುವುದು ಮುಂದಿನ ವರ್ಷದ ಯೋಗದಿನಾಚರಣೆ ದಿನಕ್ಕೇ ಅನಿಸುತ್ತದೆ. ಅಷ್ಟಕ್ಕೂ ತಿರಂಗದ ಮೇಲೆ ತಮಗೆ ಮಾತ್ರ ಅಭಿಮಾನವಿದೆಯೆಂದು ತೋರಿಸಿಕೊಳ್ಳುವ ಬಿಜೆಪಿ ನಾಯಕರು ತಮ್ಮದೇ ಆರ್‌ಎಸ್‌ಎಸ್ ಸಂಘಟನೆಯ ಕಚೇರಿಯಲ್ಲಿ ತಿರಂಗ ಹಾರಿಸುವ ಪ್ರಯತ್ನ ಮಾಡಿರುವುದು ಎಷ್ಟು ಸಲ ಎಂದು ಹೇಳಬಲ್ಲರೆ?

– ಪಿ.ಮಲ್ಲಿಕಾರ್ಜುನಪ್ಪ , ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿ, ಮಹಾರಾಜ ಕಾಲೇಜು,ಮೈಸೂರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ