Mysore
30
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಆಂದೋಲನ ಓದುಗರಪತ್ರ : 09 ಮಂಗಳವಾರ 2022

ಸಂಕೇತಾರಾಧನೆಯಾದ ಲಕ್ಷ್ಮೀ  ಪೂಜೆ

ಅತಿವೃಷ್ಟಿ, ಪ್ರವಾಹ, ಭೂಕುಸಿತ, ತೀವ್ರ ನಿರುದ್ಯೋಗ ಮತ್ತು ಬೆಲೆೆುೀಂರಿಕೆಯ ಈ ದಿನಗಳಲ್ಲಿ ಜನರು ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಮುಗಿಬಿದ್ದು ವಸ್ತುಗಳನ್ನು ಖರೀದಿಸಿದರು ಎಂದೂ ದೃಶ್ಯ ಮಾಧ್ಯಮಗಳು ವರದಿ ಮಾಡಿದವು. ವಾಸ್ತವವಾಗಿ, ಸಂಪತ್ತು, ಒಡವೆ – ವಸ್ತ್ರಗಳು ಶ್ರಮದ ಉತ್ಪನ್ನಗಳು. ಶ್ರಮಿಕರು ಇವುಗಳ ಸೃಷ್ಟಿಕರ್ತರು. ನಿಸರ್ಗ ಸಹಜ ಪದಾರ್ಥಗಳನ್ನು ಶ್ರಮದಿಂದ ಮಾರ್ಪಡಿಸಿ ಬದುಕಿಗೆ ಅಗತ್ಯವಾದ ವಸ್ತು ಮತ್ತು ಸೇವೆಗಳನ್ನು ಸೃಷ್ಟಿಸುವವರೂ ಶ್ರಮಿಕರೇ. ಇವುಗಳನ್ನು ವಿನಿಮಯ ಮಾಡಿಕೊಳ್ಳಲು ಮಾನವರು ಕಂಡು ಕೊಂಡಿರುವ ಸಾಧನ ಹಣ. ಹಣದ ಮೌಲ್ಯಕ್ಕೆ ಆಧಾರವಾಗಿ ಬಳಸುವ ಬಂಗಾರವೂ ಶ್ರಮದಿಂದ ತಯಾರಾಗುವ ವಸ್ತುವೇ. ನಿಜವಾದ ಆರಾಧನೆ ಶ್ರಮದ ಆರಾಧನೆ ಆಗಬೇಕು. ಲಕ್ಷ್ಮೀ ಹಣದ ಅಂದರೆ ವಸ್ತುವಿನ ಅಂದರೆ ಶ್ರಮದ ಅಧಿದೇವತೆ. ಆದರೆ ಲಕ್ಷ್ಮಿಪೂಜೆಯು ಶ್ರಮದ ನೈಜ ಆರಾಧನೆಯಾಗದೆ ಕೇವಲ ಸಂಕೇತರಾಧನೆ ಆಗಿದೆ. ದೇಶವೆಂದರೆ ಜನರು ಎಂದಾಗದೆ ಅದರ ಸಂಕೇತವಾದ ಭೂಪಟ, ಚಿತ್ರಪಟ ಮತ್ತು ಬಾವುಟಗಳನ್ನು ಆರಾಧಿಸುತ್ತಾರಲ್ಲ ಹಾಗೆ.
-ವಿ. ಎನ್. ಲಕ್ಷ್ಮೀನಾರಾಯಣ, ಮೈಸೂರು.


ಮುರುಘಾ ಶರಣರ ಕ್ರಮ ಸಮಂಸಜವಲ್ಲ

ಚಿತ್ರದುರ್ಗ ಮಠದ ಮುರುಘಾ ಶರಣರು ಪ್ರಗತಿಪರ ಚಿಂತಕರು. ಅಂತಹವರು ವೀರಶೈವ ಲಿಂಗಾಯಿತರ ಓಟಿಗೋಸ್ಕರ ಬಂದಿರುವ ರಾಹುಲ್ ಗಾಂಧಿ ಅವರಿಗೆ ಲಿಂಗಧಾರಣೆಯನ್ನು ಕೂತ ಜಾಗದಲ್ಲೇ, ಯಾವುದೇ ಕ್ರಮವಿಲ್ಲದೆ ಮಾಡಿದ್ದು ಸಮಂಜಸವಲ್ಲ. ವೀರಶೈವರ ಲಿಂಗಧಾರಣೆಗೆ ಅಪಚಾರವೆಸಗಿದ್ದಾರೆ. ಇನ್ನು ವೀರಶೈವರು ಮತ್ತು ಇತರರು ಯಾವ ಕಾವಿಗೆ ಕಾಲಿಗೆರಗಿ ನಮಿಸುತ್ತಿದ್ದರೋ, ಅಂತಹ ಸ್ವಾಮೀಜಿಗಳು ರಾಜಕೀಯ ನಾಯಕರ ಕಾಲಬುಡದಲ್ಲಿ ಕುಳಿತು ವೀರಶೈವ ಲಿಂಗಾಯಿತರಿಗೆ ಅಪಚಾರವೆಸಗಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ ಇದನ್ನು ಬಲವಾಗಿ ಖಂಡಿಸಬೇಕು.
-ಬ್ಯಾಂಕ್ ಶಿವಕುಮಾರ್, ಜೆ ಪಿ ನಗರ, ಮೈಸೂರು.


ಬಿಸಿಯೂಟದಲ್ಲಿ ಮೊಟ್ಟೆ ಸ್ವಾಗತಾರ್ಹ!

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಲಕ್ಷಾಂತರ ಮಕ್ಕಳು ಮಧ್ಯಾಹ್ನದ ಬಿಸಿಯೂಟ ೋಂಜನೆಯಡಿ ಆಹಾರ ಸೇವಿಸುತ್ತಿದ್ದಾರೆ. ಇದರಿಂದ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಯಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದೆ. ಪ್ರಸ್ತುತ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲು ಸರ್ಕಾರ ನಿರ್ಧರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.
ಆದೇ ರೀತಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಚುಕ್ಕಿ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮ ಕೂಡ ಮೆಚ್ಚುವಂತಹದ್ದು.
-ಹರಳಹಳ್ಳಿಪುಟ್ಟರಾಜು, ಪಾಂಡವಪುರ ತಾ.


ಟೀ ಅಂಗಡಿಗಳಲ್ಲಿ ಧೂಮಪಾನದ ಹಾವಳಿ

ಸಾಂಸ್ಕೃತಿಕ ನಾಡು ಮೈಸೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸಂಪೂರ್ಣವಾಗಿ ನಿಷೇಧವಾಗಿಲ್ಲ. ಇದು ಧೂಮಪಾನಿಗಳಲ್ಲದೆ, ಸ್ಥಳದಲ್ಲಿರುವವರಿಗೂ ಹಾನಿಕಾರಕ. ಕಾಲೇಜು, ಆಸ್ಪತ್ರೆಗಳ ಆವರಣಗಳಲ್ಲಿ ಹೆಚ್ಚಾಗಿ ಧೂಮಪಾನ ಮಾಡುತ್ತಾರೆ. ಅದರಲ್ಲಿಯೂ ಟೀ ಅಂಗಡಿಗಳಲ್ಲಿ ಧೂಮಪಾನಿಗಳಿಗೆ ಒಳಗೆ ಜಾಗ ಕಾಯ್ದಿರಿಸಿರುತ್ತಾರೆ. ಧೂಮಪಾನ ಮಾಡದವರು ಹೊರಗಡೆ ನಿಂತು ಟೀ ಕುಡಿಯುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು.
-ಅರ್ಪಣಾ ರಾಜೀವ್, ಮಹಾರಾಜ ಕಾಲೇಜು ವಿದ್ಯಾರ್ಥಿನಿ, ಮೈಸೂರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ