Mysore
30
scattered clouds

Social Media

ಶನಿವಾರ, 19 ಸೆಪ್ಟೆಂಬರ್ 2026
Light
Dark

ಆಂದೋಲನ ಓದುಗರ ಪತ್ರ : 04 ಗುರುವಾರ 2022

 

ಹೆಚ್ಚುತ್ತಿರುವ ವೈನ್ ಸ್ಟೋರು- ಬಾರು!

ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಮುಂದುವರೆಯುತ್ತಿರುವ ಹೋಬಳಿ ಕೇಂದ್ರವಾಗಿದೆ. ಯಾವುದರಲ್ಲಿ ಮುಂದುವರೆಯುತ್ತಿರುವುದೋ ಗೊತ್ತಿಲ್ಲ, ಆದರೆ ಬಾರ್‌ಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ದುರಂತದ ಹಾಗೂ ಕಳವಳಕಾರಿ ಸಂಗತಿಯೆನಿಸಿವೆ. ಈ ಮೊದಲು ಒಂದಿದ್ದರೆ ಈಗ ರಾವಂದೂರಿನಲ್ಲಿ ಎರಡು ಖಾಸಗಿ, ಒಂದು ಎಂಎಸ್‌ಐಎಲ್, ಜತೆಗೆ ಈಗ ಹೊಸದಾಗಿ ಭೋಗನಹಳ್ಳಿ ತಿರುವಿನಲ್ಲಿ ಒಂದು, ಹೀಗೆ ನಾಲ್ಕು ಬಾರ್‌ಗಳು ತೆರೆದಿವೆ. ಹೀಗಾದರೆ ಜನರ ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿ ಹೇಗೆ ಸುಧಾರಿಸಬೇಕು? ದಿನದ ಸಂಪಾದನೆಯೆಲ್ಲವೂ ರ್ಬಾ ಪಾಲಾದರೆ ಮನೆಯ ನಿರ್ವಹಣೆ ಹೇಗೆ ? ಕುಡಿತದ ಚಟ ಬೆಳೆಸಿಕೊಂಡ ಎಷ್ಟೋ ಮಂದಿ ಯುವಕರು, ಮಧ್ಯಮಯಸ್ಕರ ಜೀವನ ಹಾಗೂ ಅವರ ಮನೆಯವರ ಪಾಡು ದೇವರಿಗೆ ಪ್ರೀತಿ! ಸಂತೋಷ ಮತ್ತು ದುಃಖ ಎರಡಕ್ಕೂ ನೆಪಮಾಡಿಕೊಂಡು ಕುಡಿತಕ್ಕೆ ಹೋಗುವ ಜನರಿಗೆ ಈ ರ್ಬಾ ಗಳು ತವರುಮನೆಯಾಗಿವೆ. ಈ ಬಗ್ಗೆ ಸರ್ಕಾರ, ಜಿಲ್ಲಾಡಳಿತ ಹಾಗೂ ಗ್ರಾಮಾಡಳಿತ ಒಂದಷ್ಟು ಯೋಚಿಸಿ ಯಾವ ಪ್ರಭಾವಕ್ಕೂ ಒಳಗಾಗದೇ ಇವುಗಳಿಗೆ ಕಡಿವಾಣ ಹಾಕಬೇಕು.

-ಗೋವಿಂದೇಗೌಡ, ಅರೇನಹಳ್ಳಿ ಗ್ರಾಮ, ಪಿರಿಯಾಪಟ್ಟಣ ತಾಲ್ಲೂಕು.

 

 

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!