Light
Dark

ಚಿಕ್ಕಪ್ಪನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಶಾಸಕ ಡಾ. ಯತೀಂದ್ರ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಿರಿಯ ಸಹೋದರ ರಾಮೇಗೌಡ ಅವರ ಅಂತ್ಯಕ್ರಿಯೆಯು ಶನಿವಾರ ಸಿದ್ದರಾಮನಹುಂಡಿ ಪಕ್ಕದ ಹೊಸಹಳ್ಳಿ ಬಳಿ ಇರುವ ಜಮೀನಿನಲ್ಲಿ ನೆರವೇರಿತು. ಸಿದ್ದರಾಮಯ್ಯ ಅವರ ತಂದೆ, ತಾಯಿ, ಅಣ್ಣನ ಸಮಾಧಿ ಬಳಿಯೇ ಕಿರಿಯ ತಮ್ಮನ ಪಾರ್ಥೀವ ಶರೀರವನ್ನು ಮಣ್ಣು ಮಾಡಲಾಯಿತು.

ತೀವ್ರ ಅನಾರೋಗ್ಯದಿಂದ ರಾಮೇಗೌಡ ಶುಕ್ರವಾರ ರಾತ್ರಿ ಮೃತಪಟ್ಟಿದ್ದರು. ಬೆಳಿಗ್ಗೆಯೇ ಬೆಂಗಳೂರಿನಿಂದ ಹೊರಟು ಸಿದ್ದರಾಮನಹುಂಡಿಗೆ ಬಂದ ಮಾಜಿ ಸಿಎಂ ಸಿದ್ದರಾಮಯ್ಯ, ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಪಾರ್ಥೀವ ಶರೀರದ ದರ್ಶನ ಪಡೆದರು. ಬಳಿಕ ಚಿಕ್ಕಪ್ಪನ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟ ಶಾಸಕ ಡಾ. ಯತೀಂದ್ರ ಭಾವುಕರಾದರು. ಚಿಕ್ಕಪ್ಪನ ಪಾರ್ಥಿವ ಶರೀರಕ್ಕೆ  ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹೆಗಲು ನೀಡಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ