Mysore
20
scattered clouds

Social Media

ಗುರುವಾರ, 16 ಜನವರಿ 2025
Light
Dark

ಯಳಂದೂರು: ಭಾರಿ ಮಳೆಗೆ ಹೊಡೆದ ಗುಂಬಳ್ಳಿ ಕೆರೆ ಏರಿ

ಯಳಂದೂರು: ತಾಲ್ಲೂಕಿನ ಸಮೀಪದಲ್ಲೇ ಇರುವ ಗುಂಬಳ್ಳಿ ಗ್ರಾಮದ ಕೆರೆ ಏರಿ ರಾತ್ರಿ ಸುರಿದ ಭಾರಿ ಮಳೆಗೆ ಹೊಡೆದು ಹೋಗಿದ್ದು ಸಾಕಷ್ಟು ರೈತರ ಜಮೀನು ಜಲಾವೃತವಾಗಿದೆ.

ಸಾಕಷ್ಟು ವರ್ಷಗಳ ನಂತರ ಗುಂಬಳ್ಳಿ ಕೆರೆಗೆ ಅಪಾರ ಪ್ರಮಾಣದ ನೀರು ಬಂದಿದ್ದು ೨-೩ ದಿನಗಳ ಹಿಂದೆಯಷ್ಟೇ ಕೆರೆ ಭರ್ತಿಯಾಗಿತ್ತು. ಸೋಮವಾರ ಮುಂಜಾನೆ ಹಾಗೂ ರಾತ್ರಿ ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ ಕಟ್ಟೆ ಹೊಡೆದು ಹೋಗಿದ್ದು ರೈತರ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ