Mysore
23
overcast clouds

Social Media

ಶನಿವಾರ, 13 ಜೂನ್ 2026
Light
Dark

ತಪ್ಪು ಸ್ಕ್ಯಾನಿಂಗ್‌ ವರದಿಯಿಂದ ಬುದ್ದಿಮಾಂದ್ಯ ಶಿಶು ಜನನ: ಡಯಾಗ್ನೋಸ್ಟಿಕ್ ಕೇಂದ್ರಕ್ಕೆ ರೂ.15 ಲಕ್ಷ ದಂಡ

ಮಂಡ್ಯ: ಡಯಾಗ್ನೋಸ್ಟಿಕ್ ಕೇಂದ್ರವು ತಪ್ಪು ಸ್ಕ್ಯಾನಿಂಗ್ ವರದಿಯನ್ನು ನೀಡಿ, ಮಗುವಿನ ಅಸಹಜ ಬೆಳವಣಿಗೆಗೆ ಕಾರಣವಾಗಿದೆ. ಇದೀಗ ಅಸಹಜ ಬೆಳವಣಿಗೆ ಹೊಂದಿದ ಮಗುವಿನ ಜನನಕ್ಕೆ ಕಾರಣವಾದ ಮದ್ದೂರಿನ ಡಿ-2 ಡಯಾಗ್ನೋಸ್ಟಿಕ್ ಕೇಂದ್ರಕ್ಕೆ 15 ಲಕ್ಷ ರೂಪಾಯಿ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.

ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ಸಿಂಧೂಶ್ರೀ ಎಂಬ ಗರ್ಭಿಣಿಯು ವೈದ್ಯರ ಸಲಹೆಯಂತೆ, 20ನೇ ವಾರದ ಸ್ಕ್ಯಾನಿಂಗ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಅವರು ಮದ್ದೂರಿನ ಸಾರಿಗೆ ಬಸ್ ನಿಲ್ದಾಣದ ಬಳಿ ಇರುವ ಡಿ2 ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಭ್ರೂಣದ ಅಸಹಜ ಬೆಳವಣಿಗೆ ಪತ್ತೆ ಹಚ್ಚದೇ ತಪ್ಪು ಸ್ಕ್ಯಾನಿಂಗ್ ವರದಿ ನೀಡಲಾಗಿದೆ. ಇತ್ತ ಸ್ಕ್ಯಾನಿಂಗ್ ವರದಿ ಆಧರಿಸಿ ಸಿಂಧೂಶ್ರೀಗೆ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರು.

ಆದರೆ, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಸಿಂಧುಶ್ರೀಗೆ ಹೆರಿಗೆಯಾದಾಗ ಅಸಹಜವಾಗಿ ಬೆಳವಣಿಗೆ ಹೊಂದಿರುವ ಮಗು ಹುಟ್ಟಿದೆ. ಇದರಿಂದ ಪೋಷಕರು ಕಂಗಾಲಾಗಿದ್ದು, ಆ ಸಮಯದಲ್ಲಿ ವೈದ್ಯರು ಸ್ಕ್ಯಾನಿಂಗ್ ಪರೀಕ್ಷೆ ಸಮಯದಲ್ಲೇ ನೋಡಿಕೊಳ್ಳಲಿಲ್ಲ ಏಕೆ ಎಂದು ಪೋಷಕರನ್ನು ಪ್ರಶ್ನಿಸಿದ್ದಾರೆ. ಹೀಗೆ ತಪ್ಪು ಸ್ಕ್ಯಾನಿಂಗ್ ವರದಿ ನೀಡಿರುವ ಘಟನೆ ನಂತರ ತಿಳಿದುಬಂದಿದೆ. ಪೋಷಕರು ಆರೋಗ್ಯವಂತ ಮಗುವನ್ನು ಪಡೆಯಲು ಆಗಲಿಲ್ಲ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!