Mysore
24
overcast clouds

Social Media

ಭಾನುವಾರ, 05 ಏಪ್ರಿಲ 2026
Light
Dark

ಮನ್‌ ಕಿ ಬಾತ್‌ನಲ್ಲಿ ಚಾಮರಾಜನಗರದ ಮಹಿಳೆಯನ್ನು ಮೋದಿ ಹೊಗಳಿದ್ದೇಕೆ?

ಚಾಮರಾಜನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಚಾಮರಾಜನಗರದ ಮಹಿಳೆಯ ಕೆಲಸವನ್ನು ಹೊಗಳಿದ್ದಾರೆ.

ಚಾಮರಾಜನಗರ ಜಿಲ್ಲೆಯ ಉಮ್ಮತ್ತೂರು ಗ್ರಾಮದ ವರ್ಷಾ ಎಂಬುವವರ ಕರಕುಶಲ ಕಲೆಯ ಬಗ್ಗೆ ಪ್ರಧಾನಿ ಮೋದಿ ತಮ್ಮ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ ವೋಕಲ್ ಫಾರ್ ಲೋಕಲ್ ಮಹತ್ವವನ್ನು ಸಾರಿದ್ದಾರೆ.
ಮೋದಿ ಅವರ ಮನ್ ಕಿ ಬಾತ್‌ನಿಂದ ಪ್ರೇರೇಪಣೆಗೊಂಡಿರುವ ವರ್ಷಾ, ಕರಕುಶಲ ಉದ್ಯಮ ಆರಂಭಿಸಿ, ಬಾಳೆಗಿಡದ ನಾರಿನಿಂದ ಕರಕುಶಲ ವಸ್ತುಗಳ ತಯಾರಿಸುತ್ತಿದ್ದಾರೆ. ಬಾಳೆ ದಿಂಡನ್ನು ಬಳಸಿ ಉಪ್ಪಿನಕಾಯಿ, ಚಟ್ನಿಪುಡಿ ಸೇರಿದಂತೆ ವಿವಿಧ ತಿನಿಸು ತಯಾರಿಸುತ್ತಿದ್ದಾರೆ. ಇದರಿಂದ ಐವರು ಮಹಿಳೆಯರು, ಇಬ್ಬರು ಪುರುಷರಿಗೆ ಕೆಲಸ ಕೊಟ್ಟಿದ್ದಾರೆ. ವೋಕಲ್ ಫಾರ್ ಲೋಕಲ್‌ನಿಂದ ಇದೆಲ್ಲವು ಸಾಧ್ಯ ಎಂದು ಮೋದಿ ಹೇಳಿದರು.

ಈ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರುವ ಚಾಮರಾಜನಗರದ ವರ್ಷಾ, ನಾನು ಎಂಟೆಕ್ ಪದವೀಧರಳಾಗಿದ್ದು ಮನ್ ಕಿ ಬಾತ್‌ನಿಂದ ಪ್ರೇರಣೆ ಪಡೆದು ಬಾಳೆ ನಾರು ಹಾಗೂ ದಿಂಡಿನಿಂದ ವಿವಿಧ ವಸ್ತುಗಳನ್ನು ತಯಾರಿಸಲು ಆರಂಭಿಸಿದೆ. ಮೇಳಗಳು, ಆನ್‌ಲೈನ್ ಮಳಿಗೆ, ಸಾವಯವ ಮಳಿಗೆಗಳಲ್ಲಿ ನಮ್ಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!