ಹನೂರು: ಪಟ್ಟಣದಲ್ಲಿಂದು ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಕ್ಷೇತ್ರದ ಶಾಸಕ ಆರ್.ನರೇಂದ್ರ ಮಾತನಾಡಿ, ಹನೂರು ಕ್ಷೇತ್ರ ಖರೀದಿಗಿದೆ ಎಂದು ನಾವೇನು ಬೋರ್ಡ್ ಹಾಕಿಲ್ಲ ಎಂದು ಹೊರಗಿನಿಂದ ಬಂದು ಚುನಾವಣೆ ಮೇಲೆ ಕಣ್ಣಿಟ್ಟಿರುವವರ ಬಗ್ಗೆ ಕಿಡಿಕಾರಿದರು.
ಬೆಂಗಳೂರಿನಿಂದ ದುಡ್ಡಿನ ಗಂಟು ಹೊತ್ತುಕೊಂಡು ಬಂದಿದ್ದು ಇಲ್ಲಿ ಜನರನ್ನು ಖರೀದಿ ಮಾಡುವ ಉಮೇದಿನಲ್ಲಿದ್ದಾರೆ. ಹನೂರಿನ ಜನರಿಗು ಸ್ವಾಭಿಮಾನ ಇದ್ದು ಯಾವುದೇ ಕಾರಣಕ್ಕೂ ಹಣಕ್ಕೆ ಮಾರಿಕೊಳ್ಳಲ್ಲ, ನಾನು ಯಾವುದೇ ಹಣ, ಆಮೀಷ ತೋರಿಸದೇ 15 ಸಾವಿರ ಮಂದಿಯನ್ನು ಸೇರಿಸಿದ್ದೇನೆ, ಹೊರಗಿನಿಂದ ಬಂದವರು ಯಾವುದೇ ದುಡ್ಡು ಕೊಡದೇ ಬರೀ 500 ಜನರನ್ನು ಸೇರಿಸಿ: ನೋಡೋಣ ಎಂದು ಸವಾಲ್ ಹಾಕಿದರು.