ಚಾಮರಾಜನಗರ :.ನಗರದ ಸೋಮವಾರಪೇಟೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯವೂ ಚರಂಡಿ ನೀರು ಹರಿದುಬರುತ್ತಿದ್ದು, ಅವ್ಯವಸ್ಥೆ ತಾಂಡವಾಡುತ್ತಿದೆ. ಮಾಮೂಲಿ ದಿನಗಳಲ್ಲಿ ಹೀಗಾದರೆ ಇನ್ನೂ ಮಳೆ ಬಂದರಂತೂ ಇಲ್ಲಿ ಸಂಚರಿಸುವುದು ದುಸ್ತರವಾಗುತ್ತಿದೆ. ಅದರಲ್ಲಿಯೂ ವಾಹನ ಸವಾರರು ಹಾಗೂ ಪ್ರತಿನಿತ್ಯ ತೆರಳುವ ಶಾಲಾ ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿಯ ಸಮೀಪವೇ ಇರುವ ಕ್ಲಬ್ ನಿಂದ ಬರುವ ಗಲೀಜು ನೀರು ರಸ್ತೆಗೆ ಹರಿದುಬರುತ್ತಿರುವ ಹಿನ್ನೆಲೆ ಸಂಚಾರಕ್ಕೆ ಯೊಂದರೆಯಾಗುತ್ತಿರುವುದಲ್ಲದೆ ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲವೆನ್ನುತ್ತಾರೆ ಸ್ಥಳೀಯರು.
ಮುಂದಾದರು ಜಿಲ್ಲಾಧಿಕಾರಿಗಳೇ ಇಲ್ಲಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.