Mysore
22
broken clouds

Social Media

ಸೋಮವಾರ, 29 ಜೂನ್ 2026
Light
Dark

ಕಾಡುಗಳ್ಳ ವೀರಪ್ಪನ್ ನಿಂದ ಹತ್ಯೆಯಾದ ಹುತಾತ್ಮ ಶ್ರೀನಿವಾಸ್ ರವರ ಪುತ್ಥಳಿ ಅನಾವರಣ ನಾಳೆ

ಹನೂರು: ಕಾಡುಗಳ ವೀರಪ್ಪನಿಂದ ಹತರಾದ ದಿವಂಗತ ಪಿ ಶ್ರೀನಿವಾಸ್ ಅವರ ಹುತಾತ್ಮರ ದಿನಾಚರಣೆ ಅಂಗವಾಗಿ ಗೋಪಿನಾಥನ ಗ್ರಾಮದ ಶ್ರೀ ಮಾರಿಯಮ್ಮನ್ ದೇವಸ್ಥಾನ ಹಾಗೂ ಅರಣ್ಯ ಇಲಾಖೆ ವಸತಿಗೃಹದಲ್ಲಿ ಸೆಪ್ಟೆಂಬರ್ 11ರಂದು ದಿವಂಗತ ಪಿ ಶ್ರೀನಿವಾಸ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದೆ.

1992 ಸೆಪ್ಟೆಂಬರ್ 11ರಂದು ಕಾಡುಗಳ ವೀರಪ್ಪ ನ್ ತಾನು ಶರಣಾಗುವುದಾಗಿ ಹೇಳಿ ಶ್ರೀನಿವಾಸನ್ ಅವರನ್ನು ಕರೆಸಿಕೊಂಡು ಅಮಾನುಷವಾಗಿ ಕೊಂದು ಹಾಕಿದ್ದನು. ಕಾವೇರಿ ವನ್ಯಧಾಮದ ಎರಕೆಯಂ ಅರಣ್ಯ ಪ್ರದೇಶದಲ್ಲಿ ಇಂದಿಗೂ ಪ್ರತಿ ವರ್ಷ ಸೆಪ್ಟೆಂಬರ್ 11ರಂದು ಹುತಾತ್ಮರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಈ ವರ್ಷ ವಿಶೇಷವಾಗಿ ಗೋಪಿನಾಥನ್ ಗ್ರಾಮದ ಮಾರಮ್ಮನ ದೇವಸ್ಥಾನದ ಮುಂಭಾಗ ಹಾಗೂ ಅರಣ್ಯ ಇಲಾಖೆ ವಸತಿ ಗೃಹದ ಮುಂಭಾಗ ಶ್ರೀನಿವಾಸ ನ್ ಅವರ ಕಂಚಿನ ಪುತ್ತಳಿ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಗೋಗಿ ಪುತ್ತಳಿ ಅನಾವರಣ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಮಲೆ ಮಹದೇಶ್ವರ ವನ್ಯ ಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಜಿ ಸಂತೋಷ್ ಕುಮಾರ್, ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್ ಅಂಕರಾಜು ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!