Light
Dark

ಕಾಡಂಚಿನ ಸರ್ಕಾರಿ ಶಾಲೆಗಳಿಗೆ ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ ಭೇಟಿ & ಪರಿಶೀಲನೆ

ಹನೂರು : ಕಾಡಂಚಿನ ಸರ್ಕಾರಿ ಶಾಲೆಗಳಿಗೆ ಅಪರ  ಜಿಲ್ಲಾಧಿಕಾರಿ ಹಾಗೂ ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ಬುಧವಾರ  ಭೇಟಿ ನೀಡಿ ಪರಿಶೀಲನೆ ನಡೆಸಿದರು..

ತಾಲೂಕಿನ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಹಳೆಯೂರು, ಗೊರಸಾಣೆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಿಕ್ಷಕಿಯಾದ ಅಪರ  ಜಿಲ್ಲಾಧಿಕಾರಿ : ಹಳೆಯೂರು ಶಾಲೆಗೆ ಭೇಟಿ ನೀಡಿದ ಕಾತ್ಯಾಯಿನಿ ದೇವಿ ಯವರು ಮಕ್ಕಳಿಗೆ ಕೆಲವು ಕನ್ನಡ ಇಂಗ್ಲೀಷ್ ಪದಗಳನ್ನು ಕಪ್ಪು ಹಲಗೆಯ ಮೇಲೆ ಬರೆದು ಕೇಳಿದರು ಜೊತೆಗೆ ಮಗ್ಗಿ ಕೇಳಿ ಮಕ್ಕಳ ಉತ್ತರ ನೋಡಿ ಖುಷಿ ಪಟ್ಟರು.ಅಲ್ಲದೇ ಇಂಗ್ಲೀಷ್ ಕಲಿಕೆಗೆ ಹೆಚ್ಚು ಒತ್ತನ್ನು ನೀಡಬೇಕು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು ಎಂದರು.

ಪ್ರಾಧಿಕಾರದ ವತಿಯಿಂದ ಶಾಲೆಗಳ ಅಭಿವೃದ್ಧಿ : ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಗೊರಸಾಣೆ, ಹಳೇಯೂರು, ಕೊಂಬುಡಿಕ್ಕಿ ಈಗೆ ಕೆಲವು ಆಯ್ದ ಶಾಲೆಗಳಿಗೆ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿ ಮಾಡಲು ಕ್ರಮ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಕಾರ್ಯ ರೂಪಾಕ್ಕೆ ತರಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ಅಡುಗೆ ಮನೆ ಪರಿಶೀಲನೆ : ಮಧ್ಯಾಹ್ನದ ಬಿಸಿಯೂಟ ತಯಾರು ಮಾಡುವ ಅಡುಗೆ ಕೋಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡಿಸಿ ಅಲ್ಲಿನ ಶಿಸ್ತು ಕಂಡು ಈಗೆ ಮುಂದುವರೆಸುವಂತೆ  ತಿಳಿಸಿದ್ದಾರೆ.

ಇದೆ ವೇಳೆ ಹಳೆಯೂರು ಶಾಲೆಯ ಮುಖ್ಯ   ಶಿಕ್ಷಕ ಮಹೇಂದ್ರ ತಮ್ಮ ಶಾಲೆಗೆ ಬೇಕಾದ ಅಗತ್ಯ ಸೌಕರ್ಯ ಮಾಡಿಕೊಡುವಂತೆ ಮನವಿ ಮಾಡಿದ್ದು ಇದಕ್ಕೆ ಸಕರಾತ್ಮಕವಾಗಿ  ಅಧಿಕಾರಿಗಳು  ಸ್ಪಂದಿಸಿದ್ದಾರೆ. ಅಲ್ಲದೇ ಪ್ರಾಧಿಕಾರ ರಚನೆಯಾದ ದಿನಗಳಿಂದಲೂ ಸಹ ಯಾವ ಕಾರ್ಯದರ್ಶಿಯೂ ಶಾಲೆಗೆ ಭೇಟಿ ನೀಡಿಲ್ಲ ಆದರೇ ಈ  ಕಾರ್ಯದರ್ಶಿಗಳು ಶಾಲೆಗಳಿಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು.

ಇದೆ ಸಂದರ್ಭದಲ್ಲಿ ಪ್ರಾಧಿಕಾರದ ಲೆಕ್ಕ ಪರಿಶೋಧಕ ಪ್ರವೀಣ್ ಪಾಟೀಲ್,ಗ್ರಾಮದ ಮುಖಂಡ ಮಾದಯ್ಯಾ, ಮುಖ್ಯ ಶಿಕ್ಷಕ ಪ್ರಕಾಶ್, ಮಹೇಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ