Mysore
35
few clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ವಿವಿ ಮೊಹಲ್ಲಾ ವಿಭಾಗ ವ್ಯಾಪ್ತಿಯ ೧೧ ಕೆವಿ ಮಯೂರ, ೧೧ ಕೆವಿ ಹೊಯ್ಸಳ ಮತ್ತು ೧೧ ಕೆವಿ ಕುವೆಂಪು ವಿದ್ಯುತ್ ಮಾರ್ಗಗಳಲ್ಲಿ ನಿರ್ವಹಣಾ ಕೆಲಸದ ನಿಮಿತ್ತ ನ.೭ರಂದು ಬೆಳಿಗ್ಗೆ ೧೦ರಿಂದ ಸಂಜೆ ೫ ಗಂಟೆಯವರೆಗೆ ನಗರದ ವಿವಿಧ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಕಾವೇರಿ ಸರ್ಕಲ್, ಸಕ್ರಾಂತಿ ವೃತ್ತ, ಮಯೂರ ವೃತ್ತ, ರಾಣಿ ಚೆನ್ನಮ್ಮ ವೃತ್ತ, ಹೊಯ್ಸಳ ವೃತ್ತ, ಲಕ್ಷಿ ಕಾಂತನಗರ, ಹೆಬ್ಬಾಳ್ ೧ ಮತ್ತು ೨ನೇ ಹಂತ, ಬೃಂದಾವನ ೧ನೇ ಮತ್ತು ೨ನೇ ಹಂತ, ಡಿವಿಸಿ ಲೇಔಟ್, ಸಿ ಮತ್ತು ಡಿ ಬ್ಲಾಕ್, ವಿಜಯಬ್ಯಾಂಕ್ ವೃತ್ತ ಹಾಗೂ ಸುತ್ತಮುತ್ತ, ಮಾರುತಿ ಟೆಂಪಲ್‌ರಸ್ತೆ, ನ್ಯೂಕಾಂತರಾಜ್ ರಸ್ತೆ, ಅಪೋಲೋ ಆಸ್ಪತ್ರೆ ಸಿಗ್ನಲ್, ಕಾಮಾಕ್ಷಿ ಆಸ್ಪತ್ರೆ, ಸರಸ್ವತಿಪುರಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವಿ.ವಿ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!