Mysore
23
overcast clouds

Social Media

ಬುಧವಾರ, 19 ಆಗಸ್ಟ್ 2026
Light
Dark

ಈಜುಕೊಳ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ವಾರ್ಡ್-೨೧ಕ್ಕೆ ಸೇರಿದ ಪಾರ್ಕ್ ಅಭಿವೃದ್ದಿ ಹಾಗೂ ಈಜುಕೊಳ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಭೂಮಿ ಪೂಜೆ ನೆರವೇರಿಸಿದರು.

ಶಾಸಕರ ವಿವೇಚನಾ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ವಿಶೇಷ ಪ್ಯಾಕೇಜ್ ಅನುದಾನದಲ್ಲಿ ೧೦ ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಈಜು ಕೊಳ ಮುಂಭಾಗದ ವಿಶಾಲವಾದ ಜಾಗವು ಅಶುಚಿತ್ವದಿಂದ ಕೂಡಿದ್ದು, ಈ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಶಾಸಕರು ಸ್ಥಳ ಪರಿಶೀಲಿಸಿ, ಈ ಜಾಗದಲ್ಲಿ ತಿರುಗಾಡಲು ಉತ್ತಮ ರಸ್ತೆ, ಬೋಗಾದಿ ರಸ್ತೆಗೆ ಸೇರುವಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾ ಣ, ಇಂಟರ್ ಲಾಕಿಂಗ್, ಕುಳಿತುಕೊಳ್ಳಲು ಉತ್ತಮ ಕಾಂಕ್ರೀಟ್ ಆಸನ,ಮೇಲ್ಛಾವಣಿ ಮುಂತಾದ ನವೀನ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಅಂದಾಜು ಪಟ್ಟಿ ತಯಾರಿಸಿ ಅಗತ್ಯಅನುದಾನ ನೀಡಿ ಕಾಮಗಾರಿ ಪ್ರಾರಂಭಿಸಲು ಸೂಚಿಸಿದರು.

ಪಾಲಿಕೆ ಉಪ ಆಯುಕ್ತ ಮಹೇಶ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಹೇಮಂತ್ ಕುಮಾರಗೌಡ, ಬಿಜೆಪಿ ಮುಖಂಡ ಯಶಸ್ವಿನಿ ಸೋಮಶೇಖರ್, ಚಾಮರಾಜ ಕ್ಷೇತ್ರದ ಉಪಾಧ್ಯಕ್ಷ ಶಿವಕುಮಾರ್, ವಾರ್ಡ್ ಅಧ್ಯಕ್ಷ ಸೋಮಶೇಖರ ರಾಜೇ ಅರಸು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್, ಪುನೀತ್, ಬಿಎಲ್‌ಎ-೧ ದಿನೇಶ್ ಗೌಡ, ನವೀನ್, ಚಲುವ, ಗುತ್ತಿಗೆದಾರ ಅರವಿಂದ್, ಇಂಜಿನಿಯರ್ ವೇಣುಗೋಪಾಲ್, ಪಿ.ಕೆ.ಕೃಷ್ಣರಾಜು ಹಾಜರಿದ್ದರು.

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ವಿಶೇಷ ಪ್ಯಾಕೇಜ್ ಅನುದಾನದಲ್ಲಿ ವಾರ್ಡ್-೨೧ ಕ್ಕೆ ಸೇರಿದ ಪಾರ್ಕ್ ಅಭಿವೃದ್ಧಿ ಹಾಗೂ ಈಜುಕೊಳ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಭೂಮಿ ಪೂಜೆ ನೆರವೇರಿಸಿದರು.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!