ಮಂಡ್ಯ: ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿಯಲ್ಲಿ ನಡೆಸಿದ ರಾಜ್ಯ ಮಟ್ಟದ ಆಟೋಟ ಸ್ಪರ್ಧೆಯಲ್ಲಿ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಗೆದ್ದ ಮಂಡ್ಯದ ಕುವರಿ ಶಾರ್ವರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಬೆಳಗಾವಿಯಲ್ಲಿ ನ.೨೩ರಂದು ನಡೆದ ೨೦೨೨-೨೩ನೇ ಸಾಲಿನ ರಾಜ್ಯಮಟ್ಟದ ಸ್ಪೀಡ್ ಸ್ಕೇಟಿಂಗ್‌ನ ೧೧-೧೪ ವರ್ಷದೊಳಗಿನ ವಿಭಾಗದ ಸ್ಫರ್ಧೆಯಲ್ಲಿ ಮಂಡ್ಯ ನಗರದ ಸೈಂಟ್ ಥಾಮಸ್ ಇಂಗ್ಲಿಷ್ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಎಸ್.ಎಲ್. ಶಾರ್ವರಿ ೫೦೦ ಮೀ., ೧೦೦೦ ಮೀ. ಹಾಗೂ ೨೦೦೦ ಮೀ. ಮೂರೂ ಸ್ಫರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿ ರಾಷ್ಟಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಈಕೆಗೆ ಚಿನ್ಮಯ ಶಾಲೆಯ ದೈಹಿಕ ಶಿಕ್ಷಕರಾಗಿರುವ ಜಿ.ಎಚ್.ಶ್ರೀನಿವಾಸ್ ಅವರು ಮಾರ್ಗದರ್ಶನ ಮತ್ತು ತರಬೇತಿ ನೀಡಿರುತ್ತಾರೆ. ಶಾರ್ವರಿ ತಂದೆ ಮಂಡ್ಯ ಪಿಇಎಸ್ ಇಂಜಿನಿಯರಿAಗ್ ಕಾಲೇಜಿನಲ್ಲಿ ಸಹ ಬೋಧಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ತಾಯಿ ಕೆ.ಬಿ. ಲತಾ ಶ್ರೀರಂಗಪಟ್ಟಣ ತಾಲ್ಲೂಕಿನ ಟಿಎಂ ಹೊಸೂರಿನ ಜ್ಞಾನವಾಹಿನಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ





