Mysore
29
overcast clouds

Social Media

ಗುರುವಾರ, 11 ಜೂನ್ 2026
Light
Dark

ಅಹಂಕಾರದ ಮಾತು ಬಿಡಿ, ಕೆಲಸ ಮಾಡಿ : ಪ್ರತಾಪಸಿಂಹಗೆ ಮುಖಂಡ ಪ್ರದೀಪ್‌ಕುಮಾರ್ ಸಲಹೆ

ಸಂಸದ ಪ್ರತಾಪಸಿಂಹಗೆ ಮುಖಂಡ ಪ್ರದೀಪ್‌ಕುಮಾರ್ ಸಲಹೆ

ಮೈಸೂರು: ಟಿಪ್ಪು ರೈಲಿನ ಹೆಸರು ನಾನೇ ಬದಲಿಸಿದ್ದೇನೆ ಎನ್ನುವ ಅಹಂಕಾರದ ಮಾತುಗಳನ್ನು ಆಡುವುದು ಬಿಡಿ ಎಂದು ಕಾಂಗ್ರೆಸ್ ಮುಖಂಡ ಹಾಗೂ ಪಾಲಿಕೆ ಸದಸ್ಯ ಎಂ.ಪ್ರದೀಪ್‌ಕುಮಾರ್ ಸಂಸದ ಪ್ರತಾಪಸಿಂಹ ಅವರಿಗೆ ಸಲಹೆ ನೀಡಿದ್ದಾರೆ.

ಬಾರ್ ಮುಂದೆ ನಿಂತು ಮಾತನಾಡುವವರ ರೀತಿಯಲ್ಲಿ ನೀವು ಮಾತನಾಡುತ್ತೀದ್ದೀರಿ. ಮೈಸೂರಿನ ಸಂಸದರಾದಿ ಎರಡು ಬಾರಿ ಆಕಸ್ಮಿಕವಾಗಿ ಆಯ್ಕೆಯಾದ ನಿಮ್ಮನ್ನು ಜನ ಸಹಿಸಿಕೊಂಡಿದ್ದಾರೆ. ನೀವು ಸಮಾಜಗಳ ನಡುವೆ ಅಶಾಂತಿ ಉಂಟು ಮಾಡುತ್ತಿರುವ ಹೇಳಿಕೆಯನ್ನು ಪ್ರತಿದಿನ ನೀಡುತ್ತಿದ್ದೀರಿ. ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದ ಮೈಸೂರಿನಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ.

ಮೈಸೂರಿನ ಒಡೆಯರ್ ಅವರ ಬಗ್ಗೆ ಎಲ್ಲರಿಗೂ ಗೌರವವಿದೆ. ಅವರ ಹೆಸರನ್ನು ಒಂದು ರೈಲಿಗೆ ಸೀಮಿತ ಮಾಡುವ ಬದಲು ರೈಲ್ವೆ ನಿಲ್ದಾಣಕ್ಕೆ ಇಡುವಂತೆ ನೋಡಿಕೊಳ್ಳಿ. ಅದನ್ನು ಬಿಟ್ಟು ದಿನ ಬೆಳಗಾದರೆ ಟಿಪ್ಪು ಹೆಸರು ಪಠಿಸುತ್ತಾ ಜನರ ಭಾವನೆ ಕೆರಳಿಸುತ್ತೀದ್ದೀರಿ ಎಂದು ಟೀಕಿಸಿದ್ದಾರೆ.

ಮೈಸೂರು ಹೊರ ವರ್ತುಲ ರಸ್ತೆಗೆ ಎಲ್‌ಇಡಿ ದೀಪ ಹಾಕಿಸುವುದು ಸೇರಿ ಹಲವು ಅಭಿವೃದ್ದಿ ಚಟುವಟಿಕೆಗಳನ್ನು ಮಾಡುತ್ತೀದ್ದೀರಿ. ಅದನ್ನು ಸರಿಯಾಗಿ ಮಾಡಿ ಎಂದು ಪ್ರದೀಪ್ ಸಲಹೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!