ಸೋಮವಾರಪೇಟೆ: ಪಟ್ಟಣದ ಬ್ರಾಹ್ಮಣ ಸವಾಜದ ವತಿಯಿಂದ ಸೋಮೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಉತ್ಸವದಲ್ಲಿ ೯ ದಿನಗಳವರೆಗೆ ಶ್ರೀಪಾರ್ವತಿಗೆ ವಿಶೇಷ ಪೂಜೆ ನಡೆದು ವಿದ್ಯುಕ್ತ ತೆರೆ ಕಂಡಿತು.
ಬುಧವಾರ ದೇವಿಯ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮಹಿಳೆಯರ ಹಾದಿಯಾಗಿ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವೀರಗಾಸೆ, ಡೊಳ್ಳು ಕುಣಿತ, ಗೊಂಬೆ ಕುಣಿತ ಜನರನ್ನು ಆಕರ್ಷಿಸಿತು. ಸಂಜೆ ಆನೆಕೆರೆ ಬಳಿ ಬನ್ನಿ ಹಂಚಿ, ಉತ್ಸವ ಮೂರ್ತಿನ್ನು ವಿಸರ್ಜಿಸಲಾಗುತ್ತದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ.ವಿಜೇತ್, ಪದಾಧಿಕಾರಿಗಳು, ಸತೀಶ್, ಎಸ್.ಆರ್.ಸೋಮೇಶ್, ಎಲ್.ಎಂ.ಪ್ರೇವಾ, ಅರ್ಚನಾ, ಲಕ್ಷ್ಮೀ ಮತ್ತಿತರರು ಹಾಜರಿದ್ದರು.