Mysore
32
scattered clouds

Social Media

ಭಾನುವಾರ, 27 ಏಪ್ರಿಲ 2025
Light
Dark

ಸಿದ್ದು 75 ಅಮೃತ ಮಹೋತ್ಸವ ಚಿನ್ನದ ಪದಕದ ದತ್ತಿಯನ್ನು ಮೈ.ವಿವಿ ಕುಲಪತಿಗಳಿಗೆ ಹಸ್ತಾಂತರ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹುಟ್ಟು ಹಬ್ಬದ ಅಂಗವಾಗಿ ನಡೆದ  ಸಿದ್ದರಾಮಯ್ಯ75 ಅಮೃತ ಮಹೋತ್ಸವ ಚಿನ್ನದ ಪದಕದ ದತ್ತಿಯನ್ನು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾನ್ಯ ಕುಲಪತಿಗಳಾದ ಹೇಮಂತ್‌ ಕುಮಾರ್‌ ಅವರಿಗೆ ಇಂದು ಹಸ್ತಾಂತರ ಮಾಡಲಾಯಿತು.

ಮೈ.ವಿವಿ ಕುಲಪತಿಗೆ ಹಸ್ತಾಂತರ
ಮೈ.ವಿವಿ ಕುಲಪತಿಗೆ ಹಸ್ತಾಂತರ

ಇದೆ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಅಮೃತ ಮಹೋತ್ಸವದ ನೆನಪಿನಾರ್ಥ ಪುರಾಣಪ್ರಸಿದ್ಧವಾದ ನಾಗಲಿಂಗ ಪುಷ್ಪ ಶಶಿ ಯನ್ನು ಕ್ರಾಫರ್ಡ್ ಹಾಲ್ ಅವರಣದಲ್ಲಿ ಗೌರವಾನ್ವಿತ ಕುಲಪತಿಗಳು ನೆಡುವುದರ ಮೂಲಕ ಮೂಲಕ ನೀರೆರೆದರು . ನಂತರದಲ್ಲಿ 75 ತೆಂಗಿನ ಸಸಿಗಳನ್ನು ರೈತ ಸಂಘದ ಪದಾಧಿಕಾರಿಗಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಮೈಸೂರು ವಿವಿ ಕುಲಸಚಿವರಾದ ಪ್ರೊಫೆಸರ್ ಶಿವಪ್ಪ, ಮೈಸೂರು ಡಿಸಿಸಿ ಅಧ್ಯಕ್ಷರಾದ ಡಾ ಬಿಜೆ ವಿಜಯ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮರಿಗೌಡ, ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ವಿದ್ಯಾಸಾಗರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜು ಕಿರಣ್ ಹಾಗೂ ಜಿಲ್ಲಾ ಕಾಂಗ್ರೆಸಿನ ನೂರಾರು ಪದಾಧಿಕಾರಿಗಳು ಈ ಸಂದರ್ಭದಲ್ಲಿ
ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ