Mysore
30
broken clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಘಟನೆ ಖಂಡಿಸಿ ರಸ್ತೆ ತಡೆ; ಸರ್ಕಾರಕ್ಕೆ ಮನವಿ

ಮೈಸೂರು : ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಳೆಹಾನಿ ಪ್ರದೇಶಗಳನ್ನು ವೀಕ್ಷಣೆ ಮಾಡಲು ಕೊಡಗು ಜಿಲ್ಲೆಗೆ ತೆರಳಿದ್ದ ಸಂದರ್ಭದಲ್ಲಿ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಈ ಘಟನೆಗೆ ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗಿದ್ದು ಹಲವಾರು ಕಾಂಗ್ರೆಸ್‌ ಪಕ್ಷಗಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

 

ಈ ಸಂಬಂಧವಾಗಿ ಇಂದು ಮೈಸೂರಿನ ವರುಣ ಕ್ಷೇತ್ರದ ಮೈಸೂರು ಸುತ್ತೂರು ಮುಖ್ಯ ರಸ್ತೆಯ ಮರಡಿ ಹುಂಡಿ ಗೆಟ್ ಬಳಿ ರಸ್ತೆ ತಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಸಿದ್ದರಾಮಯ್ಯ ಸಾಹೇಬರ ಕಾರಿಗೆ ಮೊಟ್ಟೆ ಎಸೆದ ಘಟನೆ ಖಂಡಿಸಿ ಸಾವಿರಾರು ಜನರ ಸಮ್ಮುಖದಲ್ಲಿ ರಸ್ತೆ ತಡೆ ನಡೆಸಲಾಯಿತು, ಆನಂತರ ಸರ್ಕಾರಕ್ಕೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ಈ ರಸ್ತೆ ತಡೆ ಕಾರ್ಯಕ್ರಮದಲ್ಲಿ, ಸಿದ್ದರಾಮಯ್ಯ ಬ್ರಿಗೇಡ್ ರಾಜ್ಯಾಧ್ಯಕ್ಷರಾದ ಹಿನಕಲ್ ಉದಯ್,ಜೆ ಮಹಾದೇವು, ಬುಲೆಟ್ ಮಹಾದೇವು, ಮರಡಿ ಹುಂಡಿ ಪುಟ್ಟಸ್ವಾಮಿ, ಬಾಲರಾಜ್,ಸಂತ್ತೋಷ ಕಿರಾಳು.ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್, ಜಗದೀಶ್, ಪ್ರದೀಪ್, ಮರಡಿ ಹುಂಡಿ ಗ್ರಾಮದ ದೇವರಾಜು (ಜವರ) ರಾಮ, ರಘು, ರವಿ ಮಹೇಶ್,ತುಂನೇರಳೆ ಮಹೇಶ್, ರವಿ,ನಂದಿಗುಂದ ಮಹೇಶ್,ಸಪ್ಪಣ್ಣ, ಮಂಜು, ರಾಯನ ಹುಂಡಿ ಡಿ ಸಿ ಸಿ ಪಾಪಣ್ಣ, ಶೆಟ್ಟಿಹಳ್ಳಿ ಶಿವರಾಜ್, ಇನ್ನೂ ನೂರಾರು ಮುಖಂಡರು ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ