Light
Dark

ಶಿವಪುರದ ಲೋಕೇಶ್‌ ಅವರಿಂದ ಶಾಸಕ ಆರ್. ನರೇಂದ್ರ ಅವರಿಗೆ ಸನ್ಮಾನ

ಹನೂರು: (ಕೊಳ್ಳೇಗಾಲ):  ಹನೂರು ತಾಲೂಕಿನಿಂದ ಜಿಲ್ಲಾ ಹಾಪ್ ಕಾಮ್ಸ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದ ಹಿನ್ನೆಲೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶಿವಪುರ ಲೋಕೇಶ್ ರವರು ಶಾಸಕ ಆರ್ ನರೇಂದ್ರ ರವರನ್ನು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಆರ್ ನರೇಂದ್ರ ಅವಿಭಾಜಿತ ಕೊಳ್ಳೇಗಾಲ ಹನೂರು ತಾಲೂಕಿನಿಂದ ಇದುವರೆಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಿಲ್ಲಾ ಹಾಪ್ ಕಾಮ್ಸ್ ನಿರ್ದೇಶಕರಾಗಿ ಆಯ್ಕೆಯಾಗಿರಲಿಲ್ಲ, ಇದೀಗ ಖಾತೆ ತೆರೆದಿರುವುದು ಸಂತಸದ ವಿಚಾರ ಮುಂದಿನ ದಿನಗಳಲ್ಲಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ, ಹಾಪ ಕಾಮ್ಸ್ ನಿಂದ ದೊರೆಯುವ ಸವಲತ್ತುಗಳನ್ನು ರೈತರಿಗೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ಒತ್ತು ನೀಡಬೇಕು ಎಂದು ನೂತನ ನಿರ್ದೇಶಕ ಲೋಕೇಶ್ ಶಿವಪುರ ಅವರಿಗೆ ಸಲಹೆ ನೀಡಿದರು.

ನೂತನ ನಿರ್ದೇಶಕ ಶಿವಪುರ ಲೋಕೇಶ್ ಮಾತನಾಡಿ ನಾನು ಕೂಡ ರೈತ ಕುಟುಂಬದ ಸದಸ್ಯನಾಗಿದ್ದು ರೈತರ ಪರವಾಗಿ ಸದಾ ಹೋರಾಟ ಮಾಡುತ್ತೇನೆ, ತಾಲೂಕಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಹಾಪ್ ಕಾಮ್ಸ್ ಮಳಿಗೆ ತೆರೆಯಲಾಗುವುದು ಎಂದು ತಿಳಿಸಿದರು.

ಈ ವೇಳೆ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮದುವನಹಳ್ಳಿ ಶಿವಕುಮಾರ್, ಪಪಂ ಉಪಾಧ್ಯಕ್ಷ ಗಿರೀಶ್ ,ಮಾಜಿ ಸದಸ್ಯ ಮಾದೇಶ್ ಮುಖಂಡರುಗಳಾದ ಮಾದೇಶ್, ಕಣ್ಣೂರು ಮಹದೇವಸ್ವಾಮಿ, ಮಂಗಲ ಪುಟ್ಟರಾಜು,ವಾಸು ಇನ್ನಿತರರು ಹಾಜರಿದ್ದರು

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ