ಚಾಮರಾಜನಗರ: ಎಸ್ಸಿ,ಎಸ್ಟಿ, ವಿದ್ಯಾರ್ಥಿಗಳ ಯಾವುದೇ ವಿದ್ಯಾರ್ಥಿವೇತನ ಸ್ಥಗಿತಗೊಳಿಸಿಲ್ಲ. ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ೧ ರಿಂದ ೫ನೇ ತರಗತಿ ವರೆಗಿನ ಎಸ್ಸಿ, ಎಸ್ಟಿ ಬಾಲಕರಿಗೆ ೧೦೦೦ ರೂ.ಮ ಬಾಲಕಿಯರಿಗೆ ೧೧೦೦ ರೂ., ೬ ರಿಂದ ೭ನೇ ತರಗತಿಯ ಬಾಲಕರಿಗೆ ೧೧೫೦ ರೂ., ಬಾಲಕಿಯರಿಗೆ ೧೨೫೦ ರೂ. ಸ್ಕಾಲರ್ ಶಿಪ್ ನೀಡಲಾಗುತ್ತಿದೆ ಎಂದರು.
೮ನೇ ತರಗತಿಯ ಬಾಲಕರಿಗೆ ೧೨೫೦, ಬಾಲಕಿಯರಿಗೆ ೧೩೫೦ ರೂ., ೯ ರಿಂದ ೧೦ನೇ ತರಗತಿಯ ಮಕ್ಕಳಿಗೆ ಕೇಂದ್ರದಿAದ ಶೇ.೬೦ ರಷ್ಟು ಮತ್ತು ರಾಜ್ಯದಿಂದ ಶೇ.೪೦ ರಷ್ಟು ನೀಡಲಾಗುತ್ತಿದೆ. ಮನೆಯಿಂದ ಶಾಲೆಗೆ ಹೋಗುವವರಿಗೆ ೩ ಸಾವಿರ ರೂ., ಹಾಸ್ಟೆಲ್ನಲ್ಲಿ ಇರುವವರಿಗೆ ೭ ಸಾವಿರ ರೂ., ವಿತರಿಸಲಾಗುತ್ತಿದೆ ಎಂದು ಹೇಳಿದರು.
ಈ ವರ್ಷ ಇಲ್ಲಿಯ ತನಕ ವಿದ್ಯಾರ್ಥಿವೇತನ ಕೋರಿ ೧ ರಿಂದ ೮ ತರಗತಿಯಿಂದ ೬.೯೧ ಲಕ್ಷ ಅರ್ಜಿ ಬಂದಿವೆ. ೯ ರಿಂದ ೧೦ ನೇ ತರಗತಿಯಿಂದ ೨.೧೦ ಲಕ್ಷ ಅರ್ಜಿ ಬಂದಿದ್ದು, ೧.೩೭ ಕೋಟಿ ರೂ. ಬಿಡುಗಡೆ ಆಗಿದೆ ಎಂದರು.
ಶಾಸಕ ಎನ್.ಮಹೇಶ್ ಮಾತನಾಡಿ, ವಿದ್ಯಾರ್ಥಿವೇತನ ಸ್ಥಗಿತ ಎಂಬುದು ಕಾಂಗ್ರೆಸ್ನವರ ರಾಜಕೀಯ ಪಿತೂರಿಯಾಗಿದ್ದು, ಎಸ್ಸಿಎಸ್ಟಿ ಮಕ್ಕಳನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.





