ಮೈಸೂರು :ಶಾಸಕ ಎಸ್.ಎ.ರಾಮದಾಸ್ ಅವರು ಇಂದು ಮೈಸೂರು ಮಹಾನಗರಪಾಲಿಕೆಯ ವಾರ್ಡ್ ೬೩ರ ಜೆ.ಪಿ.ನಗರದ ಲಾಸ್ಟ್ ಬಸ್ ಸ್ಟಾಪ್‌ನಿಂದ ನವೋದಯ ಬಡಾವಣೆಯ ಮೂಲಕ ದಡದಹಳ್ಳಿ ಮಾರ್ಗವಾಗಿ ಸಂಚರಿಸುವ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಶಾರದಮ್ಮ, ಮುಖಂಡರಾದ ಈಶ್ವರ್, ನಾಗೇಂದ್ರ,ಶ್ರೀನಿವಾಸ್,ದೇವರಾಜೇಗೌಡ, ಅಕ್ಷಯ್, ರವಿ,ರೇಣುಕಾ, ರೇವತಿ,ನಂದೀಶ್, ರಾಜೀವ್, ರಾಜು, ಶ್ಯಾಮ್, ಇಂಜಿನಿಯರ್ ಜಗದೀಶ್ ಇನ್ನಿತರರು ಹಾಜರಿದ್ದರು.





