ಚಾಮರಾಜನಗರ: ಬೆಂಗಳೂರು-ತಮಿಳುನಾಡಿನ ದಿಂಡಿಗಲ್ ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ(209)ಹಾಳಾಗಿ ತಾಲ್ಲೂಕಿನಪುಣಜನೂರು-ಕೋಳಿಪಾಳ್ಯದ ಬಳಿ ಕೆರೆಯಂತೆ ನಿಂತಿರುವ ಮಳೆ ನೀರಿನಲ್ಲಿ ಮೀನು ಹಿಡಿದು ರಸ್ತೆ ಅವ್ಯವಸ್ಥೆ ವಿರುದ್ಧ ವಿಶಿಷ್ಟವಾಗಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದಿರುವ
ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೆದ್ದಾರಿ ಉದ್ದಕ್ಕೂ ನಿಂತಿರುವ ಮಳೆನೀರಿನಲ್ಲಿ ವ್ಯಕ್ತಿ ಯೊಬ್ಬ ಮೀನಿನ ಬಲೆ ಎಳೆಯುತ್ತಾ… ಮತ್ತೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತ ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.
ರಸ್ತೆಯ ಒಂದು ಪಾರ್ಶ್ವ ಮಳೆನೀರಿನಿಂದ ಕೂಡಿದ್ದು ಇನ್ನೊಂದು ಪಾರ್ಶ್ವದಲ್ಲಿ ವಾಹನಗಳು ಓಡಾಡುತ್ತಿವೆ. ಮೀನು ಹಿಡಿಯುವುದರೊಂದಿಗೆ ನೀರು ನಿಂತಿರುವ ಹಳ್ಳದತ್ತ ವಾಹನಗಳು ಇಳಿಯದಂತೆ ಈ ಪ್ರತಿಭಟನೆ ಮಾಡುತ್ತಿರುವುದಾಗಿ ಹೇಳಿ ಕೊಂಡಿದ್ದಾರೆ. ರಸ್ತೆ ಎಷ್ಟೊಂದು
ದೊಡ್ಡದಾಗಿ ಹಳ್ಳ ಬಿದ್ದಿದೆ ಎಂಬುದನ್ನು ಮೀನಿನ ಬಲೆಯ ಕಡ್ಡಿಯನ್ನು ಆಳಕ್ಕೆ ತೂರಿಸುವ ಮೂಲಕ ಪ್ರತಿಭಟನೆ ಸಂದರ್ಭದಲ್ಲಿ ಅನಾವರಣಗೊಳಿಸಲಾಗಿದೆ.
ಮೇನ್ ರೋಡಲ್ಲಿ ಮೀನ್ …ಹಿಡಿಯ ಮಟ್ಟಿಗೆ ನೀರು ನಿಂತಿದೆ ಎಂಬುದನ್ನು ಪ್ರತಿಭಟನೆಯೊಂದಿಗೆ ಸಾಕ್ಷೀಕರಿಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.