ಮೈಸೂರು: ವಿಶ್ವೇಶ್ವರಯ್ಯ ನಗರದ ಕೈಗಾರಿಕಾ ಬಡಾವಣೆಯ ವಿನಾಯಕ ಟ್ರೇಡರ್ಸ್‌ನ ಗೋದಾಮಿನಲ್ಲಿ ಪಡಿತರದ ಮೂಲಕ ವಿತರಿಸುವ 150 ಕ್ವಿಂಟಲ್ ರಾಗಿ ಪತ್ತೆಯಾಗಿದೆ.
ಈ ಸಂಬಂಧ ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದಾರೆ.
ಗೋದಾಮಿಗೆ ದಾಳಿ ಮಾಡಿದ ವೇಳೆ ಯಾವುದೇ ಬಿಲ್ ಇಲ್ಲದ ಲಾರಿಯಲ್ಲಿ ಶೇಖರಿಸಿಟ್ಟಿದ್ದ ರಾಗಿ ಪತ್ತೆಯಾಗಿದ್ದು, ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.





