ಸುತ್ತೂರು: ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಮಳೆ ನಡುವೆಯೂ ಕೂಡ ವರುಣ ಕ್ಷೇತ್ರದ ವರಕೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಅಲಗಯ್ಯನ ಹುಂಡಿ ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆಗಳು ಇರುವ ಜಾಗವನ್ನು ವೀಕ್ಷಿಸಿ ಮಳೆಯ ನಡುವೆಯೇ ಗ್ರಾಮಸ್ಥರ ಕುಂದು ಕೊರತೆ ಆಲಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ವರಕೋಡು ಉಮೇಶ್, ಭುಗತಗಳ್ಳಿ ಮಣಿ, ಎಪಿಎಂಸಿ ಸದಸ್ಯರಾದ ಸಿದ್ದರಾಮನಹುಂಡಿ ಬಸವರಾಜು, ವರಕೋಡು ಗ್ರಾಪಂ ಅಧ್ಯಕ್ಷ ರಾಜು, ವರುಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಯಣ್ಣಹುಂಡಿ ರವಿ, ವರುಣ ನಾಡಕಚೇರಿಯ ಉಪತಹಸಿಲ್ದಾರ್ ಲತಾ, ಪಿಡಿಒ ಬಸವರಾಜು, ಯಡಕೊಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಶೇಖರ್, ಸಿದ್ದರಾಮ, ತಾಪಂ ಸದಸ್ಯರಾದ ಚೋರನಹಳ್ಳಿ ರಾಜು, ಚಿಕ್ಕದೇವಯ್ಯ, ಉಮೇಶ್, ಪಾಪಣ್ಣ, ಪ್ರಸಾದ್, ಲಲಿತಾದ್ರಿಪುರ ಬಸವರಾಜ್, ತೇಜು, ಮುಖಂಡರು, ಅಧಿಕಾರಿಗಳು, ಗ್ರಾಪಂ ಸದಸ್ಯರು ಇದ್ದರು.