Mumbai
31
overcast clouds

Social Media

ಬುಧವಾರ, 10 ಜೂನ್ 2026
Light
Dark

ಕಾವೇರಿ ನದಿಗಿಳಿದ ನಾಗಲ್ಯಾಂಡ್ ಮೂಲದ ಇಬ್ಬರು ಯುವಕರು ನಾಪತ್ತೆ

ಕುಶಾಲನಗರ: ಕಾವೇರಿ ನದಿಗೆ ಇಳಿದ ನಾಗಲ್ಯಾಂಡ್ ಮೂಲದ ಇಬ್ಬರು ಯುವಕರು ನಾಪತ್ತೆಯಾಗಿರುವ ಘಟನೆ ಕುಶಾಲನಗರ ರಸೂಲ್ ಲೇಔಟ್ ಬಳಿ ಬುಧವಾರ ಸಂಜೆ ನಡೆದಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ನಾಗಾಲ್ಯಾಂಡ್ ರಾಜ್ಯದ ಬಸೋಸೊ ಕುಂ ಚಂಗ್(೨೩) ಹಾಗೂ ಯಾಂಕಾಂಗ್ (೨೭) ನಾಪತ್ತೆಯಾದ ಯುವಕರು.

ಕುಶಾಲನಗರದ ಹೊಟೇಲ್‌ವೊಂದರಲ್ಲಿ ಇಬ್ಬರು ಯುವಕರು ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ಕೆಲಸಕ್ಕೆ ರಜೆ ಮಾಡಿದ್ದ ಯುವಕರು ಮತ್ತೋರ್ವ ಯುವತಿಯೊಂದಿಗೆ ಸಂಜೆ ನದಿಯತ್ತ ತೆರಳಿದ್ದಾರೆ. ನದಿ ದಡದಲ್ಲಿ ಪಾರ್ಟಿ ಮಾಡಿದ ಬಳಿಕ ಇಬ್ಬರು ಯುವಕರು ನದಿಗಿಳಿದಿದ್ದಾರೆ. ಈ ಸಂದರ್ಭ ಆಳವಾದ ಗುಂಡಿಯಲ್ಲಿ ಮುಳುಗಿ ಯುವಕರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಈ ಸಂಬಂಧ ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕತ್ತಲೆಯಾದ ಹಿನ್ನೆಲೆ ಕಾರ್ಯಾಚರಣೆ ಸಾಧ್ಯವಾಗಿಲ್ಲ. ಗುರುವಾರ ಪತ್ತೆಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

Tags:
error: Content is protected !!