Light
Dark

ಮೈಸೂರು : ಗಮನ ಸೆಳೆದ ಶಾಲಾ ಮಕ್ಕಳ ಪಂಚ ತಾಳವಾದ್ಯ ಪ್ರದರ್ಶನ

ಮೈಸೂರು  : ನಗರದ ರಾಮಾನುಜ ಮುಖ್ಯ ರಸ್ತೆಯ ಅಕ್ಕಮ್ಮಣಿ ಆಸ್ಪತ್ರೆ ಎದುರು ತಾಳವಾದ್ಯ ಪ್ರತಿಷ್ಠಾನದ ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶಾಲೆಯ ಮಕ್ಕಳು ಪಂಚ ತಾಳ ವಾದ್ಯಗಳನ್ನು ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಪ್ರದರ್ಶನದಲ್ಲಿ ರಾಷ್ಟ್ರಗೀತೆ ಮತ್ತು ದೇಶಭಕ್ತಿ ಗೀತೆಗಳು ಪ್ರಚುರಪಡಿಸಿ ನೆರೆದಿದ್ದ ಜನರನ್ನು ರಂಜಿಸಿದರು. ವಿಶೇಷವೆಂದರೆ ಇನ್ನೂ ಕೆಲವು ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಾದ್ಯ ಬಾರಿಸಿದರು.

ನಗರ ಪಾಲಿಕೆ ಸದಸ್ಯಮಟ ಮಾ.ವಿ. ರಾಮಪ್ರಸಾದ್, ಮುಖಂಡರಾದ ವಿಕ್ರಂ ಅಯ್ಯಂಗಾರ್, ಕಲಾವಿದ ಅಜಯ್ ಶಾಸ್ತ್ರಿ, ಸ್ಕೂಲ್ ಆಫ್ ರಿಧಮ್ಸ್ ಸಂಸ್ಥಾಪಕ ಡಾ.ಸಿ.ಆರ್. ರಾಘವೇಂದ್ರ ಪ್ರಸಾದ್ ಪಾಲ್ಗೊಂಡಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ