Mysore
24
broken clouds

Social Media

ಭಾನುವಾರ, 15 ಜೂನ್ 2025
Light
Dark

ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಜನಸಂಪರ್ಕ ಸಭೆ ಸದ್ಬಳಕೆ ಮಾಡಿಕೊಳ್ಳಿ: AEE ಶಂಕರ್

ಹನೂರು : ಟಿ. ಸಿ ಸೇರಿದಂತೆ ಇನ್ನಿತರ ಸೆಸ್ಕಾಂ ಇಲಾಖೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ರೈತರು ಮಾಹಿತಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು ಹನೂರು ಸೆಸ್ಕಾಂ ಎಇಇ ಶಂಕರ್ ತಿಳಿಸಿದರು.

ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೋರ್ (ಬಾವಿ) ವಿದ್ಯುತ್ ಬಿಲ್ ಪಾವತಿ ವಿಳಂಬ ಆಗುತ್ತಿದೆ ದುರ್ಬಳಕೆ ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದ. 105 ಟಿಸಿ ಅಳವಡಿಸಲಾಗಿದ್ದು ಕಾಡಂಚಿನ ಗ್ರಾಮಗಳಲ್ಲಿ ಟಿಸಿ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಈಗಾಗಲೇ ಅನುದಾನ ಬಿಡುಗಡೆ ಆಗಿದ್ದು ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ರೈತರ ದೂರು ಆಲಿಸಿ ಅದನ್ನು ದಾಖಲು ಮಾಡಿಕೊಳ್ಳಲಾಗುತ್ತಿದ್ದು ಅದರಂತೆಯೇ ಸೂಕ್ತ ಸೂಕ್ತ ಕ್ರಮವಹಿಸಲಾಗುವುದು ಎಂದು ಹೇಳಿದರು

ಹನೂರು ತಾಲೂಕಿನ ವಿವಿಧ ಕಡೆಗಳಲ್ಲಿ ವಿದ್ಯುತ್ ಪರಿವರ್ತಕ ಸಮಸ್ಯೆ ಇದೆ. ಇದನ್ನು ಸರಿಪಡಿಸಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಹೆಲ್ಪ್ ಲೈನ್ ಸಂಖ್ಯೆಗೆ ಕರೆ ಮಾಡಿದರೆ ಕರೆ ಸ್ವೀಕರವಾಗುತ್ತಿಲ್ಲ . 63ಕೆವಿ ವಿದ್ಯುತ್ ಸಮಸ್ಯೆ ಟಿಸಿ ಬಳಿ ಗಿಡಗಂಟಿ ತೆರವುಗೊಳಿಸಬೇಕು ಎಂದು ರೈತ ಮುಖಂಡರಾದ ಬೊಮ್ಮೇಗೌಡ, ಕೆ.ವಿ.ಸಿದ್ದಪ್ಪ, ಮಣಿಗಾರ್ ಪ್ರಸಾದ್ ಒತ್ತಾಯಿಸಿದರು.

ಸಭೆಯಲ್ಲಿ ಸೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ರಂಗಸ್ವಾಮಿ, ರಾಜು ಮತ್ತಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!