Light
Dark

ಪ್ಲಾಸ್ಟಿಕ್ ದಾರ ಕುತ್ತಿಗೆಗೆ ಸಿಲುಕಿ ಗಾಯಗೊಂಡಿದ್ದ ಕೆನ್ನಾಯಿ ರಕ್ಷಣೆ

ಅರಣ್ಯ ಇಲಾಖೆಯಿಂದ ಸತತ 10 ದಿನಗಳ ಕಾರ್ಯಾಚರಣೆಗೆ ವನ್ಯಜೀವಿ ಪ್ರಿಯರ ಮೆಚ್ಚುಗೆ

ಅನಿಲ್ ಅಂತರಸಂತೆ

ಅಂತರಸಂತೆ: ಆಕಸ್ಮಿಕವಾಗಿ ಪ್ಲಾಸ್ಟಿಕ್ ದಾರವನ್ನು ಕುತ್ತಿಗೆಗೆ ಸಿಲುಕಿಸಿಕೊಂಡು ಗಾಯಗೊಂಡಿದ್ದ ಕಾಡುನಾಯಿಯನ್ನು(ಕೆನ್ನಾಯಿ) ಹಿಡಿದು, ಅದಕ್ಕೆ ಸಿಲುಕಿದ್ದ ದಾರವನ್ನು ಬಿಡಿಸಿರುವ ದೇಶದ ಮೊದಲ ಯಶಸ್ವಿ ಕೆನ್ನಾಯಿಯ ಕಾರ್ಯಾಚರಣೆಯನ್ನು ನಾಗರಹೊಳೆ ಅರಣ್ಯ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ನಡೆಸಿದ್ದು, ಅರಣ್ಯ ಇಲಾಖೆಯ ಕಾರ್ಯಕ್ಕೆ ವನ್ಯಜೀವಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಹುಲಿ, ಚಿರತೆ, ಆನೆಯಂತಹ ಜೀವಿಗಳ ರಕ್ಷಣಾ ಕಾರ್ಯಚರಣೆಗಳ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಆದರೆ ಕೆನ್ನಾಯಿೊಂಂದನ್ನು ವಿಶೇಷ ಕಾಳಜಿಯ ಮೂಲಕ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿರುವ ಅಪರೂಪದ ಘಟನೆ ಇದಾಗಿದೆ.

ನಾಗರಹೊಳೆಯ ಅಂತರಸಂತೆ ವನ್ಯಜೀವಿ ವಿಭಾಗದಲ್ಲಿ ಕಳೆದ ಕೆಲದಿನಗಳ ಹಿಂದೆ ೭ ಕೆನ್ನಾಯಿಗಳ ಗೊಂಪೊಂದರ ಒಂದು ಕೆನ್ನಾಯಿ ಕುತ್ತಿಗೆಗೆ ಬಿಗದಂತೆ ಪ್ಲಾಸ್ಟಿಕ್ ದಾರವೊಂದನ್ನು ಸಿಲುಕಿಸಿ ಕೊಂಡು ಓಡಾಡುತ್ತಿದ್ದುದು ಸಾಕ್ಷ್ಯಚಿತ್ರ ನಿರ್ಮಿಸುತ್ತಿದ್ದ ತಂಡವೊಂದರ ಕ್ಯಾಮೆರಾಗೆ ಸೆರೆಯಾಗಿತ್ತು. ಕೂಡಲೇ ಅವರು ಅಂತರಸಂತೆ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಎಸ್.ಎಸ್.ಸಿದ್ಧರಾಜು ಅವರ ಗಮನಕ್ಕೆ ತಂದಿದ್ದರು. ಈ ವಿಚಾರವಾಗಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿದ್ದ ಅವರು, ಅವರ ಮಾರ್ಗದರ್ಶನದಂತೆ ಕಾರ್ಯಚರಣೆ ನಡೆಸಿ ಆ ಕೆನ್ನಾಯಿಗೆ ಅರಿವಳಿಕೆ ಚುಚ್ಚುಮದ್ದು ನೀಡುವ ಮೂಲಕ ಸೆರೆ ಹಿಡಿದು ಬಳಿಕ ಕುತ್ತಿಗೆಯಲ್ಲಿದ್ದ ದಾರವನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಜುಲೈ ಕೊನೆಯ ವಾರ ಕೆನ್ನಾಯಿೊಂಂದು ಕುತ್ತಿಗೆಗೆ ದಾರ ಸಿಲುಕಿರುವ ವಿಚಾರ ತಿಳಿದುಬಂದಿದ್ದು, ಬಹುಶಃ ಕೆನ್ನಾಯಿಯು ಕಾಡಂಚಿನಲ್ಲಿ ಓಡಾಡುವಾಗ ಆಕಸ್ಮಿಕವಾಗಿ ಜಮೀನಿನಲ್ಲಿ ಹಾಕಿದ್ದ ದಾರ ಅದರ ಕುತ್ತಿಗೆ ಸಿಲುಕಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿತ್ತು.

ಇದಾದ ಬಳಿಕ ಪಶುವೈದ್ಯ ರಮೇಶ್ ಅವರ ಸಹಾಯದೊಂದಿಗೆ ನಾಯಿಯ ಹುಡುಕಾಟದಲ್ಲಿ ತೊಡಗಿದ ಅರಣ್ಯ ಇಲಾಖೆ ಸತತ ೧೦ ದಿನಗಳ ಕಾರ್ಯಾಚರಣೆ ಬಳಿಕ ಕೆನ್ನಾಯಿಗೆ ಅರವಳಿಕೆ ನೀಡಿ ಬಳಿಕ ಸಿಬ್ಬಂದಿ ಸಹಾಯದಿಂದ ಕುತ್ತಿಗೆಯಲ್ಲಿ ದಾರವನ್ನು ತೆಗೆದಿದ್ದಾರೆ. ಆದರೆ ಕುತ್ತಿಗೆಗೆ ಸಿಲುಕಿದ್ದ ಪ್ಲಾಸ್ಟಿಕ್ ದಾರವನ್ನು ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ಕೆನ್ನಾಯಿ ನಡೆಸಿದ ಪ್ರಯತ್ನದಿಂದ ದಾರ ಮತ್ತಷ್ಟು ಬಿಗಿಯಾಗಿ ದಿನ ಕಳೆದಂತೆ ಕತ್ತನ್ನು ಕೊರೆಯಲಾರಂಭಿಸಿತ್ತು. ಇದರಿಂದಾಗಿ ಕುತ್ತಿಗೆ ಸುತ್ತ ಬಲವಾದ ಗಾಯವಾಗಿದ್ದರಿಂದ ಕೆನ್ನಾಯಿಗೆ ಸೂಕ್ತ ಚಿಕಿತ್ಸೆ ನೀಡಿ ಬಿಡಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮರಳಿ ಗುಂಪು ಸೇರಿದ ಕೆನ್ನಾಯಿ: ಕೆನ್ನಾಯಿಯನ್ನು ಸೆರೆಹಿಡಿಯುವ ವೇಳೆ ೭ ಕೆನ್ನಾಯಿಗಳಿದ್ದ ಗುಂಪು ಚದುರಿದ್ದರಿಂದ ಚಿಕಿತ್ಸೆ ನೀಡಿ ಬಿಟ್ಟ ೩ ದಿನಗಳ ಬಳಿಕ ಮರಳಿ ಕುಟುಂಬವನ್ನು ಸೇರಿದೆ. ಈ ವೇಳೆ ಕುಟುಂಬ ಸದಸ್ಯರು ಚಿಕಿತ್ಸೆ ಪಡೆದು ಬಂದ ಸದಸ್ಯನನ್ನು ಗುಂಪಿನಲ್ಲಿ ಸೇರಿಸಿಕೊಂಡು ಅದರ ೋಂಗ ಕ್ಷೇಮ ವಿಚಾರಿಸಿದ ಪರಿ ಕುತೂಹಲವಾಗಿತ್ತು ಎನ್ನುತ್ತಾರೆ ಕೆನ್ನಾಯಿಯ ಮೇಲೆ ನಿಗಾ ಇರಿಸಿದ್ದ ಸಿಬ್ಬಂದಿ.

ಕಾಡುನಾಯಿಗಾಗಿ ಅರಣ್ಯ ಇಲಾಖೆ ಇಷ್ಟು ಕ್ರಮವಹಿಸಿ ಯಶಸ್ವಿ ಕಾರ್ಯಚರಣೆ ಮಾಡಿರುವುದು ಬಹುಶಃ ದೇಶದಲ್ಲಿ ಇದೇ ಮೊದಲು ಹಾಗೂ ಅಪರೂಪದ ಪ್ರಯತ್ನವಾಗಿದೆ ಎನ್ನತ್ತಾರೆ ಹಿರಿಯ ಅಧಿಕಾರಿಗಳು. ಯಾವುದೇ ಜೀವಿಯಾಗಲಿ ಅರಣ್ಯಕ್ಕೆ ಅದು ಅಮೂಲ್ಯವಾದದ್ದು ಎಂಬ ಸಂದೇಶವನ್ನು ಸಾರುವಲ್ಲಿ ನಾಗರಹೊಳೆ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕೆನ್ನಾಯಿೊಂಂದು ಕುತ್ತಿಗೆ ದಾರ ಸಿಲುಕಿಕೊಂಡು ಗಾಯಗೊಂಡಿರುವ ವಿಚಾರವೊಂದು ತಿಳಿದ ಕೂಡಲೆ ನಾನು ನಮ್ಮ ಸಿಬ್ಬಂದಿೊಂಂದಿಗೆ ಕಾರ್ಯಾಚರಣೆ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿದ್ದೆ. ನಂತರ ನಮ್ಮ ಇಲಾಖೆ ಸಿಬ್ಬಂದಿ ಯದಿಂದ ಯಶಸ್ವಿ ಕಾರ್ಯಾಚರಣೆೊಂಂದನ್ನು ಮಾಡಿದ್ದೇವೆ. ಅರಣ್ಯ ಸಂಪತ್ತು ಎಂದೇ ಮೇಲೆ ಎಲ್ಲಾ ಜೀವಿಗಳ ರಕ್ಷಣೆ ನಮಗೆ ಮುಖ್ಯ ಎಂಬುದಕ್ಕೆ ಈ ಕಾರ್ಯಚರಣೆ ಸಾಕ್ಷಿಯಾಗಿದೆ.
-ಹರ್ಷಕುಮಾರ್ ಚಿಕ್ಕನರಗುಂದ, ಡಿಸಿಎಫ್, ನಾಗರಹೊಳೆ


ಕಾಡುನಾಯಿೊಂಂದರ ಕಾರ್ಯಚರಣೆಯ ಕುರಿತು ನಾವು ನಮ್ಮ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ಮಾರ್ಗದರ್ಶನದ ಮೇಲೆ ಕಾರ್ಯಚರಣೆ ನಡೆಸಿದ್ದೆವು. ಈಗ ಅದು ಯಶಸ್ವಿಯಾಗಿದ್ದು, ಗಾಯಗೊಂಡಿದ್ದ ಕೆನ್ನಾಯಿಯೂ ಮರಳಿ ಗುಂಪು ಸೇರಿದೆ.
-ಎಸ್.ಎಸ್.ಸಿದ್ದರಾಜು, ವಲು ಅರಣ್ಯಾಧಿಕಾರಿ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ