Mysore
29
light rain

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಮೈಸೂರು: ಸಾಲಗಾರರ ಕಾಟಕ್ಕೆ ಬೇಸತ್ತು ಪಿಜಿ ಓನರ್‌ ಆತ್ಮಹತ್ಯೆ

ಮೈಸೂರು: ನಗರದ ವಿಜಯನಗರದಲ್ಲಿ ಪಿಜಿ ನಡೆಸುತ್ತಿದ್ದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರೈಲ್ವೆ ಬಡಾವಣೆಯಲ್ಲಿ ನಡೆದಿದೆ.

ಜಯಶ್ರೀ ಎಂಬ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದು, ಡೆತ್‌ನೋಟ್‌ ಬರೆದಿಟ್ಟು ತನ್ನ ಸಾವಿಗೆ ಸಾಲದ ಬಾಧೆಯೇ ಕಾರಣ ಎಂಬುದನ್ನು ತಿಳಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪಿಜಿ ಗಂಗಾಧರೇಶ್ವರ ಎಂಬ ಪಿಜಿ ನಡೆಸುತ್ತಿದ್ದ ಜಯಶ್ರೀ ಅವರು ಪಿಜಿ ಸಲುವಾಗಿ ಸಾಲ ಮಾಡಿದ್ದರು.

ಇನ್ನು ಹೆಚ್ಚಿನ ಆದಾಯ ಬಾರದ ಕಾರಣ ಮತ್ತಷ್ಟು ಸಾಲ ಮಾಡಿದ್ದರು ಎನ್ನಲಾಗಿದೆ. ಸಮಯಕ್ಕೆ ಸರಿಯಾಗಿ ಸಾಲ ಹಿಂದಿರುಗಿಸಲು ಜಯಶ್ರೀ ವಿಫಲವಾಗಿದ್ದು, ಸಾಲ ನೀಡಿದವರು ಪಿಜಿ ಬಳಿ ಬಂದು ಗಲಾಟೆ ಮಾಡಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಜಯಶ್ರೀ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೇ ಡೆತ್‌ನೋಟ್‌ನಲ್ಲಿ ಮಕ್ಕಳಿಗೆ ಒಳ್ಳೆ ತಾಯಿ ಆಗಲಿಲ್ಲ, ಸಾಲದ ತಾಯಿ ಆದೆ ಎಂದು ಜಯಶ್ರೀ ಬರೆದುಕೊಂಡಿದ್ದು, ಸಾವಿತ್ರಿ, ಸುಕನ್ಯ, ಪ್ರೇಮಾ, ದೇವಮ್ಮ, ಸಾಕಮ್ಮ, ಪುಷ್ಪಲತಾ, ಪುಷ್ಪ, ಸುಮ, ಶೋಭಾ, ವಿಜಯ, ಫೈನಾನ್ಸ್ ಮಾಲೀಕ ಪ್ರದೀಪ್ ಹಾಗೂ ಕುಮಾರ್ ಎಂಬುವವರು ಕಿರುಕುಳ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.

ಯಾವುದೇ ಸಮಸ್ಯೆಗೂ ಅತ್ಮಹತ್ಯೆ ಒಂದೇ ಪರಿಹಾರವಲ್ಲ. ನಿಮ್ಮ ತೊಂದರೆಗಳನ್ನು ಆತ್ಮೀಯರ ಜತೆ ಹಂಚಿಕೊಳ್ಳಿ. ಇಲ್ಲವಾದರೆ ಈ ಸಹಾಯವಾಣಿಗೆ ಕರೆಮಾಡಿ ಮಾತನಾಡಿ: 9152987821

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!