Mysore
23
overcast clouds

Social Media

ಭಾನುವಾರ, 14 ಜೂನ್ 2026
Light
Dark

paycm ಅಭಿಯಾನಕ್ಕೆ ಮೈಸೂರಿನಲ್ಲಿ ಚಾಲನೆ

ಮೈಸೂರು : ರಾಜ್ಯದಾದ್ಯಂತ ಸಾಕಷ್ಟು ಚರ್ಚೆಯಾಗುತ್ತಿರುವ ಪೇಸಿಎಂ ಅಭಿಯಾನಕ್ಕೆ ನಗರದಲ್ಲಿಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್‌ ಅವರು ಪೋಸ್ಟರ್‌ ಅಂಟಿಸುವ ಮೂಲಕ ಚಾಲನೆ ನೀಡಿದರು.

ನಗರದ ಜೆ.ಕೆ.ಮೈದಾನದ ಕಾಂಪೌಂಡ್‌ಗೆ ಪೇಸಿಎಂ ಪೋಸ್ಟರ್ ಅಂಟಿಸುವ ಮೂಲಕ ಅಭಿಯಾನಕ್ಕೆ  ಅಧಿಕೃತವಾಗಿ  ಚಾಲನೆ ನೀಡಿದ್ದಾರೆ. ಈ ಸಂಸರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಕೆಪಿಸಿಸಿ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ,
ಮುಖಂಡರಾದ ಶಫಿ, ಗಿರೀಶ್, ಮಹೇಶ್ ಮತ್ತಿತರ ಮುಖಂಡರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಪೇ ಸಿಎಂ ಅಭಿಯಾನವನ್ನು ನೆನ್ನೆಯಿಂದ  ಜಿಲ್ಲಾ ಮಟ್ಟದಲ್ಲೂ ನಡೆಸಲು ನಿರ್ಧರಿಸಿರುವ ಕಾಂಗ್ರೆಸ್ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 10 ಸಾವಿರ ಪೋಸ್ಟರ್ ಗಳನ್ನು ಪೂರೈಸುತ್ತಿದೆ.  ಬಿಜೆಪಿಯೊಂದಿಗೆ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಮುಂದಿನ ವಿಧಾನಸಭೆ ಚುನಾವಣೆವರೆಗೂ ಇದೇ ರೀತಿಯ ಆಕ್ರಮಣಕಾರಿಯ ಪ್ರಚಾರ ತಂತ್ರಗಳನ್ನು ರೂಪಿಸಲು ಯೋಜಿಸಿದೆ.
ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಆಪರೇಷನ್ ಕಮಲಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಗೋಡೆಗಳ ಮೇಲೆ ಇದೇ ರೀತಿಯ ಕೆಲವು ಪೋಸ್ಟರ್ ಗಳು
ಕಂಡುಬಂದಿದ್ದವು. ಆಗ ಯಡಿಯೂರಪ್ಪ ಹೆಚ್ಚು ತಲೆ ಕೆಡಿಸಿಕೊಳ್ಳದೆ ನಿರ್ಲಕ್ಷಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!