Mysore
21
overcast clouds

Social Media

ಭಾನುವಾರ, 14 ಜೂನ್ 2026
Light
Dark

ಪಂಪ್‌ಸೆಟ್‌ಗಳಿಗೆ ಮೀಟರ್ ಬೇಡ : ರೈತರ ಪ್ರತಿಭಟನೆ

ಚಾಮರಾಜನಗರ: ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ನೂತನ ವಿಧೇಯಕವನ್ನು ಕೇಂದ್ರ ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಪಣ್ಯದಹುಂಡಿ ಬಳಿ ರೈತರು ಸೋಮವಾರ ರಸ್ತೆತಡೆ ಚಳವಳಿ ನಡೆಸಿದರು.

ನಗರ-ನಂಜನಗೂಡು ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವ  ರೈತರ ಪಾಲಿಗೆ ನೂತನ ವಿದ್ಯುತ್ ವಿಧೇಯಕ ಮರಣಶಾಸನವಾಗಿದೆ ಎಂದು  ಆಕ್ರೋಶ ವ್ಯಕ್ತಪಡಿಸಿದ ರೈತರು, ವಿದ್ಯುತ್ ಖಾಸಗೀಕರಣವನ್ನು ಖಂಡಿಸಿದರು.
ಭಾಗ್ಯಜ್ಯೋತಿ, ಕುಠೀರಜ್ಯೋತಿ ಫಲಾನುಭವಿಗಳಿಗೆ ಉಚಿತವಾಗಿ ವಿದ್ಯುತ್ ದೊರಕದಂತೆ ಮಾಡುವ ಷಡ್ಯಂತ್ರವನ್ನು ಈ ವಿಧೇಯಕದ ಮೂಲಕ ಮಾಡಲಾಗುತ್ತಿದೆ. ಇತ್ತೀಚಿನ  ವರ್ಷಗಳಲ್ಲಿ ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗಧಿಯಾಗಿಲ್ಲ.
ಇದರಿಂದ ಕಬ್ಬು ಬೆಳೆಗಾರರು ತೀವ್ರಸಂಕಷ್ಟದಲ್ಲಿದ್ದು ಪ್ರತಿ  ಟನ್‌ಗೆ ಕನಿಷ್ಠ ೫ಸಾವಿರ ರೂ. ನಿಗಧಿ ಮಾಡಬೇಕೆಂದು
ಆಗ್ರಹಿಸಿದರು.

ಜಿಲ್ಲೆಯಲ್ಲಿ ಸತತಮಳೆ ಹಾಗೂ ಪ್ರವಾಹದಿಂದ ಇತ್ತೀಚೆಗೆ ನೂರಾರು ಕೋಟಿ ರೂ. ಬೆಲೆಬಾಳುವ ಬೆಳೆ ನಷ್ಟ ಸಂಭವಿಸಿದ್ದು ಆಗಿರುವ ನಷ್ಟವನ್ನು ಸರ್ಕಾರ ಯಥಾವತ್ತಾಗಿ ತುಂಬಿಕೊಡಬೇಕೆಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಆಗ್ರಹಿಸಿದರು. ತಹಶೀಲ್ದಾರ್ ಬಸವರಾಜು ಅವರು ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ಹೆಗ್ಗೊಠಾರವಿಜಯಕುಮಾರ್, ಮೇಲಾಜಿಪುರ ಕುಮಾರ್, ಹೊನ್ನೂರು ಬಸವಣ್ಣ, ಕುಂದಕೆರೆ ಸಂಪತ್ತು,  ಶಿವಮೂರ್ತಿ, ಅಶೋಕ್, ಮಹೇಂದ್ರ, ಮಹೇಶ್,  ಕಡಬೂರುಮಂಜುನಾಥ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!