Mysore
31
broken clouds

Social Media

ಶುಕ್ರವಾರ, 15 ಮೇ 2026
Light
Dark

ನೂತನ ಕೊಠಡಿಗೆ ಶಾಸಕ ಆರ್ ನರೇಂದ್ರ ರವರಿಂದ ಭೂಮಿ ಪೂಜೆ

ಹನೂರ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೂತನವಾಗಿ 22 ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.

ಪಟ್ಟಣದ ಶ್ರೀ ಜಿ ವಿ ಗೌಡ ಪದವಿಪೂರ್ವ ಕಾಲೇಜು ಆವರಣದಲ್ಲಿ ನೂತನ ಕೊಠಡಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹನೂರು ಶೈಕ್ಷಣಿಕ ವಲಯದ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿರುವುದರಿಂದ ಕೊಠಡಿಗಳ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆ ವಿವೇಕ ಯೋಜನೆಯಡಿ ಸರ್ಕಾರ 22 ಹೊಸ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಈ ಕೊಠಡಿಗಳ ಸೌಲಭ್ಯ ದೊರಕಲಿದೆ .ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಸುಮಾರು 30 ವರ್ಷ ಬಾಳಿಕೆ ಬರುವಂತೆ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.

ಕೇಸರಿ ಬಣ್ಣಕ್ಕೆ ಆಕ್ಷೇಪ: ಯಾವುದೇ ಒಂದು ಪಕ್ಷ ಚುನಾವಣೆಯಲ್ಲಿ ಅಧಿಕಾರ ಪಡೆಯಲು ಚಿನ್ಹೆ ಬಳಸಬೇಕು.ಅದನ್ನು ಹೊರತುಪಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬಂದರೆ ಕಾಂಗ್ರೆಸ್ ಚಿಹ್ನೆ ಜಾ.ದಳ ಅಧಿಕಾರಕ್ಕೆ ಬಂದರೆ ಅದರ ಚಿಹ್ನೆ ಬಿಜೆಪಿ ಬಂದರೆ ಕಮಲದ ಚಿಹ್ನೆ ಬಣ್ಣ ಬಳಿಸುವುದು ತಪ್ಪು, ಸರ್ಕಾರ ನಡೆಸುವುದು ಜನರ ಆದಾಯದಿಂದ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಶಾಲೆಗೆ ಚೆನ್ನಾಗಿ ಕಾಣಲು ಯಾವ ಬಣ್ಣ ಬಳಸಬೇಕು ಅದನ್ನು ಬಳಸಬೇಕು. ಇದುವರೆಗೂ ಯಾವುದೇ ಒಂದು ಸರ್ಕಾರ ತಮ್ಮ ಪಕ್ಷಗಳ ಚಿಹ್ನೆಯ ಬಣ್ಣವನ್ನು ಬಳಿಸಿಲ್ಲ. ಈಗಿನ ಬಿಜೆಪಿ ಸರ್ಕಾರ ಕಮಲದ ಚಿಹ್ನೆ ಕೇಸರಿ ಎಂದು ಬಣ್ಣ ಬಳಿಯುವ ಯೋಚನೆ ಮಾಡಿದ್ದರು ಅದು ತಪ್ಪು. ಬಿಜೆಪಿಯವರು ಬೇಕಿದ್ದರೆ ತಮ್ಮ ಸ್ವಂತ ಹಣದಿಂದ ಶಾಲೆಗಳನ್ನು ಅಭಿವೃದ್ಧಿಪಡಿಸಿ ಯಾವ ಬಣ್ಣ ಬೇಕಾದರು ಬಳಸಿಕೊಳ್ಳಲಿ ಇದನ್ನು ಹೊರತುಪಡಿಸಿ , ಯಾವುದೇ ಕಾರಣಕ್ಕೂ ಉದ್ದೇಶಪೂರ್ವಕವಾಗಿ ಕೇಸರಿ ಬಣ್ಣ ಬಳೆಯುವುದಕ್ಕೆ ನನ್ನ ಆಕ್ಷೇಪವಿದೆ ಎಂದು ಶಾಸಕ ಆರ್ ನರೇಂದ್ರ ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಸದಸ್ಯರಾದ ಸಂಪತ್ ಕುಮಾರ್ ಸೋಮಶೇಖರ್, ಹರೀಶ್, ಪ್ರಾಂಶುಪಾಲ ಸ್ವಾಮಿ, ಮುಖ್ಯ ಶಿಕ್ಷಕ ಲಿಂಗರಾಜು, ಸಹ ಶಿಕ್ಷಕ ಶಾಂತರಾಜು ಬಿ ಆರ್ ಸಿ ದಿನೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!