Mysore
27
haze

Social Media

ಗುರುವಾರ, 12 ನವೆಂಬರ್ 2026
Light
Dark

ಓದುಗರ ಪತ್ರ: ಪದಗಳನ್ನು ಬಳಸುವಾಗ ರಾಜಕಾರಣಿಗಳಿಗೆ ಎಚ್ಚರ ಅಗತ್ಯ

dgp murder case

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅವರನ್ನು ಅವರೇನು ಹಳ್ಳಿ ಗುಗ್ಗುನಾ? ಎಂದು ಪ್ರಶ್ನೆ ಮಾಡಿದ್ದಾರೆ. ಆ ಮೂಲಕ ಇಂದಿಗೂ ಹಳ್ಳಿಯವರು ಗುಗ್ಗುಗಳು, ಪಟ್ಟಣದವರು ಬುದ್ಧಿವಂತರು ಎಂಬ ಅರ್ಥ ಅವರ ಮಾತಿನಲ್ಲಿದೆಯೇ ಎಂಬ ಅನುಮಾನ ಮೂಡುತ್ತದೆ.

ವಾಸ್ತವವಾಗಿ ಹಳ್ಳಿಯವರ ಮುಗ್ಧತೆ, ನೇರಾ ನೇರ ನಡವಳಿಕೆಯೇ ಗುಗ್ಗುತನ, ದಡ್ಡತನ ಎಂಬ ಹೀಗಳಿಕೆಗೆ ಒಳಗಾಗಿದೆ. ಹಾಗೆ ನೋಡಿದರೆ ದಿನಬೆಳಗಾದರೆ ಮೋಸ ಹೋಗುವ ‘ಸಿಟಿ ಗುಗ್ಗು’ಗಳು ರಾಜ್ಯರಾಜಧಾನಿಯಾದ ಬೆಂಗಳೂರ ಸಾಕಷ್ಟು ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.

ಗ್ರಾಮೀಣ ಅಭಿವೃದ್ಧಿಗೆ ಒತ್ತು ಕೊಡುವುದಾಗಿ ಬೊಬ್ಬೆ ಹೊಡೆಯುವ ಸರ್ಕಾರಗಳು ಹಳ್ಳಿಗರನ್ನು ಗುಗ್ಗುಗಳನ್ನಾಗಿಯೇ ಉಳಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡಿಕೊಂಡೇ ಬಂದಿವೆ. ಆದರೆ ಈಗಿನ ಸನ್ನಿವೇಶವನ್ನು ಗಮನಿಸಿದರೆ ಆ ರೀತಿ ಕಾಣುವುದಿಲ್ಲ. ಗ್ರಾಮೀಣರು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುತ್ತಿದ್ದಾರೆ ಎಂಬ ಅರಿವು ಇರಬೇಕಾಗಿದೆ. ಸಾರ್ವಜನಿಕ ಜೀವನದಲ್ಲಿರುವವರು ಪದಬಳಕೆಯನ್ನು ಎಚ್ಚರಿಕೆಯಿಂದ ಬಳಸಿದರೆ ಉತ್ತಮ.

-ಸಿದ್ದಲಿಂಗೇಗೌಡ,ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು

Tags:
error: Content is protected !!