Mysore
25
overcast clouds
Light
Dark

ನಾಗಮಂಗಲ : ನಾಳೆಯಿಂದ ಕಾಲುಬಾಯಿ ರೋಗಕ್ಕೆ ಲಸಿಕೆ

ನಾಗಮಂಗಲ: ರೈತರಿಗೆ ಆರ್ಥಿಕವಾಗಿ ಸಂಕಷ್ಟವುಂಟು ಮಾಡುವ ಕಾಲು ಬಾಯಿ ರೋಗದಿಂದ ರಾಸುಗಳನ್ನು ರಕ್ಷಿಸಲು ಉಚಿತವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಪಶುಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ರೈತರಲ್ಲಿ ಮನವಿ ಮಾಡಿದ್ದಾರೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಸಂಯುಕ್ತವಾಗಿ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮವನ್ನು ೩ನೇ ಸುತ್ತಿನಲ್ಲಿ ನ.೭ ರಿಂದ ಡಿ.೭ ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕಾಲುಬಾಯಿ ರೋಗದಿಂದ ಜಾನುವಾರುಗಳಿಗೆ ಹೇಗೆ ಮಾರಕ ?

ಕಾಲುಬಾಯಿ ರೋಗವು ಹಸು, ಎಮ್ಮೆ, ಹಂದಿ ಮುಂತಾದ ಸೀಳುಗೊರಸುಗಳುಳ್ಳ ಜಾನುವಾರುಗಳಿಗೆ ಮಾರಕವಾಗಿದ್ದು, ರೋಗದಿಂದ ಜಾನುವಾರುಗಳು ಗುಣಮುಖವಾದರೂ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ಮತ್ತು ಇಳುವರಿಯಲ್ಲಿ ಇಳಿಮುಖವಾಗುತ್ತದೆ. ಕಾಲುಬಾಯಿ ರೋಗವು ಒಂದು ವೈರಾಣುವಾಗಿದ್ದು ಲಸಿಕೆ ಹಾಕಿಸುವುದೊಂದೆ ಇದಕ್ಕಿರುವ ಪರಿಹಾರ. ರೈತರು ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಪ್ರತಿ ೬ ತಿಂಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ಹಾಕಿಸುವಂತೆ ಅವರು ಕೋರಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ