Mysore
24
overcast clouds

Social Media

ಮಂಗಳವಾರ, 29 ಏಪ್ರಿಲ 2025
Light
Dark

ದಸರಾ ಗಜಪಡೆಗಳಿಗೆ ತೂಕ ಹಾಕುವ ಪ್ರಕ್ರಿಯೆ : ಮಾಜಿ ಕ್ಯಾಪ್ಟನ್ ಅರ್ಜನನೇ ಬಲಶಾಲಿ

ಮೈಸೂರು :ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2022 ರ ದಸರಾ ಗಜಪಡೆಗಳಿಗೆ ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ತೂಕ ಹಾಕುವ ವೇವ್ ಬ್ರಿಡ್ಜ್ ನಲ್ಲಿ ಆನೆಗಳಿಗೆ ತೂಕ ಹಾಕುವ ಪ್ರಕ್ರಿಯೆ ನಡೆಯಿತು.

ಈ ಬಾರಿಯೂ ಮಾಜಿ ಕ್ಯಾಪ್ಟನ್ ಅರ್ಜನನೇ ಬಲಶಾಲಿಯಾಗಿದ್ದು, 5660 ಕೆ.ಜಿ ಹೊಂದಿರುವ ಅರ್ಜುನ. ಹಾಗೂ ಕಾವೇರಿ‌ 3100, ಕ್ಯಾಪ್ಟನ್ ಅಭಿಮನ್ಯು 4770,
ಮಹೇಂದ್ರ 4250, ಲಕ್ಷ್ಮೀ 2920, ಚೈತ್ರ 3050, ಭೀಮ 3920, ಧನಂಜಯ 4810, ಗೋಪಾಲಸ್ವಾಮಿ 5140 ತೂಕಗಳನ್ನು ಹೊಂದಿವೆ.

ಆನೆಗಳಿಗೆ ನಾಳೆ ಮತ್ತು ನಾಳಿದ್ದು ಅರಮನೆ ಒಳಗಡೆ ತಾಲೀಮು.
14 ರಿಂದ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಆರಂಭವಾಗುತ್ತದೆ. ಆನೆಗಳ ತೂಕ ಹೆಚ್ಚಿಸುವುದು ನಮ್ಮ ಉದ್ದೇಶವಲ್ಲಾ. ಆನೆಗಳನ್ನ ಆರೋಗ್ಯವಾಗಿ ನೋಡಿಕೊಳ್ಳುವುದು ನಮ್ಮ ಉದ್ದೇಶ.


ಆನೆಗಳಿಗೆ ಈಗ ಪ್ರೋಟಿನ್ ಆಹಾರ ಹೆಚ್ಚಿಸುತ್ತೇವೆ.
ದಸರಾ ಮುಗಿಯುದರೊಳಗಡೆ ಈ ಎಲ್ಲಾ ಆನೆಗಳ ತೂಕ ಹೆಚ್ಚು ಕಮ್ಮಿ 500 ಕೆ.ಜಿ ಹೆಚ್ಚಾಗುತ್ತದೆ. ಎಂದು
ಆನೆಗಳ ತೂಕದ ಬಳಿಕ ಡಿಸಿಎಫ್ ಕರಿಕಾಳನ್ ಹೇಳಿಕೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ