ಮೈಸೂರು : ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೌಶಲ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಶುಕ್ರವಾರ ನಡೆದ ಬೃಹತ್ ಉದ್ಯೋಗ ಮೇಳಕ್ಕೆ ಯುವ ಸಮೂಹವೇ ಹರಿದು ಬಂದಿತು.
೨೨೦ಕ್ಕೂ ಹೆಚ್ಚು ಕಂಪಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿದ್ದು, ೪೫ ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡುವ ಆನ್‌ಲೈನ್‌ನಲ್ಲಿ ೪೦ ಸಾವಿರ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಮೈಸೂರು ವಿಭಾಗದಲ್ಲಿ ೪೩,೫೭೭ ಯುವನಿಧಿ ಪಲಾನುಭವಿಗಳಿದ್ದು, ಇವರಲ್ಲಿ ೩೧೫೮ ಜನ ನೋಂದಣಿ ಮಾಡಿಕೊಂಡಿದ್ದರು.
ಮೇಳಕ್ಕೆ ಉಚಿತ ಪ್ರವೇಶ ಇದೆ. ಯಾವುದೇ ಕನಿಷ್ಠ ವಿದ್ಯಾರ್ಹತೆ ವಯಸ್ಸಿನ ಮಿತಿ ಇರಲಿಲ್ಲ. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಕಂಪನಿಗಳು ಸಂದರ್ಶನ ನಡೆದವು. ಉದ್ಯೋಗ ಆಕಾಂಕ್ಷಿಗಳು, ಉದ್ಯೋಗದಾತರ ನೋಂದಣಿಯಿಂದ ಪ್ರಾರಂಭಗೊಂಡು ಸಂದರ್ಶನ, ಅಂತಿಮ ಆಯ್ಕೆ ಪ್ರಕ್ರಿಯೆ ಎಲ್ಲವೂ ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ ಮೂಲಕವೇ ನಡೆಯಲಿದೆ. ಈ ಡೇಟಾವನ್ನು ಬಳಸಿಕೊಂಡು ಮುಂದೆಯೂ ಯುವ ಜನರಿಗೆ ಉದ್ಯೋಗ ದೊರಕಿಸುವ ಪ್ರಯತ್ನ ನಡೆಯಿತು.
ಇದನ್ನು ಓದಿ: ಉದ್ಯೋಗ ಸೃಷ್ಟಿ ನಮ್ಮ ಆದ್ಯತೆ ; ಪ್ರತೀ ಜಿಲ್ಲೆಯಲ್ಲಿಯೂ ಉದ್ಯೋಗ ಮೇಳ : ಸಿ.ಎಂ
ಈಗಾಗಲೇ ಆನ್‌ಲೈನ್ ಮೂಲಕ ಕಂಪನಿಗಳು ಸಂದರ್ಶನ ನಡೆಸುತ್ತಿದ್ದು, ತಮ್ಮ ಹುದ್ದೆಗೆ ಬೇಕಾದ ಅಭ್ಯರ್ಥಿಗಳ ಹೊಂದಾಣಿಕೆ ಮಾಡಿಕೊಂಡವು.
ಹುಣಸುರು, ಎಚ್.ಡಿ.ಕೋಟೆ, ನಂಜನಗೂಡು, ಪಿರಿಯಾಪಟ್ಟಣ, ಕೆ.ಆರ್.ನಗರ, ಶ್ರೀರಂಗಪಟ್ಟಣ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಯುವ ಜನರು ಉದ್ಯೋಗ ಪಡೆದುಕೊಂಡು ಖುಷಿಯನ್ನು ಹಂಚಿಕೊಂಡರು. ಇಲಾಖೆಯಿಂದಲೇ ಎಲ್ಲರಿಗೂ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿಕಲಚೇತನರಿಗೆ ಸಮಸ್ಯೆಯಾಗದಂತೆ ಪ್ರತ್ಯೇಕ ನೋಂದಣಿ ಕೇಂದ್ರ, ಸಾರಿಗೆ ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಾಜ್ಯ ಸರ್ಕಾರ ನಿರುದ್ಯೋಗಿಗಳ ನೋವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಉದ್ಯೋಗದಾತರನ್ನು ಒಂದೇ ಸೂರಿನಡಿಯಲ್ಲಿ ಕೂಡಿ ಹಾಕಿ ಕೆಲಸ ನೀಡುತ್ತಿರುವುದು ಹೆಮ್ಮೆಯ ವಿಚಾರ. ರಾಜ್ಯಾದಾದ್ಯಂತ ಈ ರೀತಿಯ ಕಾರ್ಯವಾಗಬೇಕು ನಿರುದ್ಯೋಗಿಗಳು ಸಂಖ್ಯೆ ಕ್ಷೀಣಿಸಲಿದೆ. ಸರ್ಕಾರದ ಆರು ತಿಂಗಳಿಗೊಮ್ಮೆಯಾದರು ಈ ರೀತಿಯ ಮೇಳಗಳನ್ನು ಆಯೋಜಿಸಬೇಕು ಎಂದು ಶುಭಾ ಹೇಳಿದರು.
ನಾನು ಬಿಕಾಂ ಮುಗಿಸಿದ್ದೇನೆ. ಎಲ್ಲ ಕಡೆ ಕೆಲಸ ಹುಡುಕುತ್ತಿದ್ದೆ. ಆದರೆ, ಎಲ್ಲಿಯೂ ಸಿಕ್ಕಿರಲಿಲ್ಲ. ಸರ್ಕಾರದಿಂದ ನಡೆಯುತ್ತಿರುವ ಉದ್ಯೋಗ ಮೇಳದಲ್ಲಾದರೂ ಸಿಗಬಹುದು ಎಂಬ ಆಕಾಂಕ್ಷೆಯಿಂದ ಬಂದಿದ್ದೇನೆ. ಇಂತಹ ಮೇಳಗಳನ್ನು ಆಯೋಜಿಸುವುದು ಒಳ್ಳೆಯದು ಎಂದು ಸ್ಪಂದನಾ ಹೇಳಿದರು.




