ಸರಗೂರು : ನಾಲೆಯಲ್ಲಿ ಹಸುವಿಗೆ ನೀರು ಕುಡಿಸಲು ಹೋದಾಗ ಯುವಕನೊಬ್ಬ ಕಾಲುಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಾಮೇಗೌಡರ ಹುಂಡಿ ಗ್ರಾಮದಲ್ಲಿ ನಡೆದಿದೆ.
ಇದನ್ನು ಓದಿ: ನಗರಾಭಿವೃದ್ಧಿ ಇಲಾಖೆಯಿಂದ ಯುಜಿಡಿ ನಿರ್ವಹಣೆ ಅಸಾಧ್ಯ : ಸಚಿವ ಬೈರತಿ ಸುರೇಶ್
ಗ್ರಾಮದ ದರ್ಶನ್ (19) ಮೃತಪಟ್ಟ ಯುವಕ. ಈತನು ಗ್ರಾಮದ ಸಮೀಪ ಇರುವ ಕಪಿಲಾ ಬಲದಂಡೆ ನಾಲೆಗೆ ಹಸುವಿಗೆ ನೀರು ಕುಡಿಸಲೆಂದು ಹೋಗಿದ್ದಾಗ, ನೀರು ಕುಡಿಯುವ ವೇಳೆಯಲ್ಲಿ ಹಸು ಹಗ್ಗವನ್ನು ಎಳೆದಾಗ ಹಗ್ಗ ಹಿಡಿದಿದ್ದ ಈತ ಕಾಲುಜಾರಿ ನೀರೊಳಗೆ ಮುಳುಗಿ ಮೃತಪಟ್ಟಿದ್ದಾನೆ.
ಈ ಸಂಬಂಧ ಸರಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸರಗೂರು ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ, ಮೃತದೇಹಕ್ಕಾಗಿ ಶೋಧಿಸುತ್ತಿದ್ದಾರೆ. ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





