Mysore
26
scattered clouds
Light
Dark

ವೇದಿಕೆ ಮೇಲೆ ಸಿಎಂಗೆ ಚೀಟಿ ಕೊಟ್ಟ ಯಡಿಯೂರಪ್ಪ

ಮೈಸೂರು: ಇಂದು (ಮೇ 11) ನಗರದಲ್ಲಿ ನಡೆದ ʼಸ್ವಾಭಿಮಾನಿಗೆ ಸಾವಿರ ನುಡಿ ನಮನʼ ವಿ.ಶ್ರೀನಿವಾಸ್‌ ಪ್ರಸಾದ್‌ ಶ್ರದ್ಧಾಂಜಲಿ ಕಾರ್ಯಕ್ರಮ ಕಾಂಗ್ರೆಸ್‌-ಬಿಜೆಪಿ ನಾಯಕರ ಸಮಾಗಮಕ್ಕೆ ವೇದಿಕೆಯಾಯಿತು.

ಡಾ.ಬಿ.ಆರ್.‌ ಅಂಬೇಡ್ಕರ್‌ ಶಿಕ್ಷಣ ಹಾಗೂ ಸಾಂಸ್ಕೃತಿಕ ಟ್ರಸ್ಟ್‌, ಸಮಾನತೆ ಸ್ವಾಭಿಮಾನ-ಸ್ವಾವಲಂಬನೆ ಪ್ರತಿಷ್ಠಾನ ಮತ್ತು ಸಮಾನತೆ ಪ್ರಕಾಶನದ ಸಹಯೋಗದಲ್ಲಿ ಮಾನಂದವಾಡಿ ರಸ್ತೆಯ ರೇಷ್ಮೆ ಕಾರ್ಖಾನೆ ಎದುರು ಆಯೋಜಿಸಿದ್ದ ʻಸ್ವಾಭಿಮಾನಿಗೆ ಸಾವಿರ ನುಡಿನಮನ-ವಿ.ಶ್ರೀನಿವಾಸ್‌ ಪ್ರಸಾದ್‌ ಶ್ರದ್ಧಾಂಜಲಿʼ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌ ಯಡಿಯೂರಪ್ಪ ಅವರು ವೇದಿಕೆ ಹಂಚಿಕೊಂಡರು.

ಉಭಯ ನಾಯಕರು ಕುಶಲೋಪರಿ ವಿಚಾರಿಸಿ, ಅಕ್ಕಪಕ್ಕದ ಕುರ್ಚಿಯಲ್ಲಿ ಕುಳಿತಿದ್ದರು. ಈ ವೇಳೆ ಬಿ.ಎಸ್‌ ಯಡಿಯೂರಪ್ಪ ಅವರು ಸಿ.ಎಂ ಸಿದ್ದರಾಮಯ್ಯ ಅವರಿಗೆ ಒಂದು ಚೀಟಿಯನ್ನು ನೀಡಿದರು. ಆ ಚೀಟಿಯನ್ನು ಮುಖ್ಯಮಂತ್ರಿ ತಮ್ಮ ಶರ್ಟ್‌ ಜೇಬಿಗೆ ಇಟ್ಟುಕೊಂಡರು. ಬಳಿಕ ಚೀಟಿಯಲ್ಲಿರುವ ವಿಚಾರದ ಬಗ್ಗೆ ಕೆಲಕಾಲ ಪರಸ್ಪರ ಮಾತುಕತೆ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ. ಡಾ.ಹೆಚ್.ಸಿ ಮಹದೇವಪ್ಪ, ಸಂಸದ ಪ್ರತಾಪ ಸಿಂಹ, ಶಾಸಕರಾದ ಟಿ.ಎಸ್.‌ ಶ್ರೀವತ್ಸ, ಎ.ಆರ್‌ ಕೃಷ್ಣಮೂರ್ತಿ, ದರ್ಶನ ಧ್ರುವರಾರಾಯಣ, ಶ್ರೀನಿವಾಸ ಪ್ರಸಾದ್‌ ಪತ್ನಿ, ಭಾಗ್ಯಲಕ್ಷ್ಮಿ, ಸಿ.ಎಸ್‌ ದ್ವಾರಕನಾಥ್‌, ಪ್ರಸಾದ್‌ ಅವರ ಮೂವರು ಪುತ್ರಿಯರು ಹಾಗೂ ಅಳಿಯಂದಿರು ಇದ್ದರು.