Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

ಏ.16ರಂದು ಯಶವಂತ ಸರದೇಶಪಾಂಡೆಯ ‘ಸೂಪರ್ ಸಂಸಾರ’ ನಾಟಕ

ಮೈಸೂರು: ಖ್ಯಾತ ರಂಗಕರ್ಮಿ ಡಾ.ಯಶವಂತ ಸರದೇಶಪಾಂಡೆ ಅವರ ಹುಬ್ಬಳ್ಳಿಯ ಗುರು ಇನ್ ಸ್ಟಿ ಟ್ಯೂಟ್ ವತಿಯಿಂದ ಏಪ್ರಿಲ್ 16ರಂದು ಸಂಜೆ 6.30ಕ್ಕೆ ನಗರದ ಕಲಾಮಂದಿರದಲ್ಲಿ ‘ಸೂಪರ್ ಸಂಸಾರ’ ಎಂಬ ನಗೆ ನಾಟಕ ಪ್ರದರ್ಶನಗೊಳ್ಳಲಿದೆ.

ಪ್ರಯೋಗ ಹಾಗೂ ಮಾಧ್ಯಮ ‌ಸಹಯೋಗದೊಂದಿಗೆ ಈ ನಾಟಕ ಪ್ರಯೋಗಗೊಳ್ಳಲಿದೆ. ಮುಂಬಯಿಯ‌ ಸಂತೋಷ್ ಪವಾರ ಅವರ ಮರಾಠಿ ನಾಟಕವನ್ನು ಡಾ.ಯಶವಂತ ಸರದೇಶಪಾಂಡೆ ಅನುವಾದಿಸಿ, ನಿರ್ದೇಶಿಸಿದ್ದಾರೆ.

ಈ ನಾಟಕ ನೋಡುವವರಿಗೆ ‘ನಗೆ ಖಚಿತ- ಉಪಾಹಾರ ಉಚಿತ’ ಅಂದರೆ ನಾಟಕದ ನಂತರ ಪ್ರತಿಯೊಬ್ಬರಿಗೂ ಬ್ರಾಹ್ಮಿನ್ಸ್ ಕೆಫೆಯಿಂದ ಉಪಾಹಾರ ಇರುತ್ತದೆ ಎಂದು ಯಶವಂತ ಸರದೇಶಪಾಂಡೆ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ