ಮೈಸೂರು : ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆ ಮುಂದುವರೆದಿದ್ದು, ಕೆಲವೆಡೆ ಬಿರುಸಿನ ಮಳೆಯಾಗಿದೆ.
ಪಿರಿಯಾಪಟ್ಟಣ, ಹುಣಸೂರು, ಧರ್ಮಾಪುರ, ಬಿಳಿಕೆರೆ, ಕೆ.ಆರ್ ನಗರ ಹಾಗೂ ಮೈಸೂರು ಜಿಲ್ಲೆಯಾದ್ಯಂತ ಭಾನುವಾರ ರಾತ್ರಿಯೂ ಮಳೆ ಸುರಿದಿದ್ದು, ಇಂದು ಅಂದರೆ ಸೋಮವಾರ ಬೆಳಿಗ್ಗೆಯೂ ಕೆಲವೆಡೆ ಸೋನೆ ಮಳೆ ಮುಂದುವರೆದಿತ್ತು.
ಮುಂಜಾನೆ ಸುರಿದ ಮಳೆಯಿಂದಾಗಿ ಕಚೇರಿಗೆ ಹೋಗುವವರು ಪರದಾಡುವಂತಾದ ಸ್ಥಿತಿಯೂ ನಿರ್ಮಾಣವಾಯಿತು. ಇನ್ನೂ ಅಲ್ಲಲ್ಲಿ ಮರೆಗಳ ಕೊಂಬೆಗಳು ಮುರಿದು ಬಿದ್ದಿದ್ದವು.
ಜಿಲ್ಲೆಯಾದ್ಯಂತ ಸೋಮವಾರದಿಂದ ನಾಲ್ಕು ದಿನ ಭಾರಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.





