Mysore
20
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ದೇಶ ವಿಚಾರದಲ್ಲಿ ಜಾತಿ,ಧರ್ಮ ಬಿಟ್ಟು ಒಟ್ಟಾಗಬೇಕು : ಎಂಎಲ್‌ಸಿ ಮಂಜೇಗೌಡ

ಮೈಸೂರು : ದೇಶದ ವಿಚಾರ ಬಂದಾಗ ಯಾವುದೇ ಪಕ್ಷ, ಜಾತಿ ಧರ್ಮ ಬಿಟ್ಟು ಎಲ್ಲರೂ ಒಟ್ಟಾಗಿ ನಿಲ್ಲಬೇಕು. ಆದರೆ, ಈ ವಿಚಾರದಲ್ಲಿ ಅಪಸ್ವರ ಎತ್ತುವವರು ನಿಜವಾಗಿಯೂ ದೇಶ ದ್ರೋಹಿಗಳು ಎಂದು ಎಂಎಲ್‌ಸಿ ಮಂಜೇಗೌಡ
ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ನಡೆದ ಕಾಶ್ಮೀರದ ಉಗ್ರರ ದಾಳಿಯನ್ನ ತೀವ್ರವಾಗಿ ಖಂಡಿಸಿ ಉಗ್ರರ ಸದೆ ಬಡಿಯಲು ನಿಂತಿರುವ ಪ್ರಧಾನಿ ಮೋದಿಯ ಬೆನ್ನಿಗೆ ದೇವೇಗೌಡರು ನಿಂತಿದ್ದಾರೆ. ಇಂತಹ ಸಂಧರ್ಭದಲ್ಲಿ ಕೆಲವು ಕಾಂಗ್ರೆಸ್ ನಾಯಕರು ಆಪರೇಷನ್ ಸಿಂಧೂರವನ್ನ ಲೇವಡಿ ಮಾಡುತ್ತಿದ್ದಾರೆ. ಇದು ಬಹಳ ಖಂಡನೀಯ ಎಂದರು.

ಎಚ್.ಡಿ ದೇವೇಗೌಡರು ದೇಶ ಕಂಡ ಧೀಮಂತ ನಾಯಕ. ಪ್ರಧಾನಿಯಾಗಿದ್ದ ಸಂಧರ್ಭದಲ್ಲಿ ತೆರೆದ ವಾಹನದಲ್ಲಿ ಜಮ್ಮುಕಾಶ್ಮೀರಕ್ಕೆ ಭೇಟಿ ನೀಡಿದ್ದ ಧೀರ ಪ್ರಧಾನಿ. ಅವರ ನೆರಳಿನಲ್ಲಿ ನಮ್ಮ ರಾಜ್ಯದಲ್ಲಿರುವ ಹಲವಾರು ರಾಜಕೀಯ ನಾಯಕರಯ ರಾಜಕೀಯ ಭವಿಷ್ಯ ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

ಇಂದು 50 ವರ್ಷ ಬದುಕೋದೆ ಹೆಚ್ಚು. ಆದರೆ, ಅವರು 93ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ದೇವೇಗೌಡರಿಗೆ ನಾಡ ದೇವತೆ ಇನ್ನಷ್ಟು ಆಯಸ್ಸು ಆರೋಗ್ಯ ಕೊಡಲಿ. ನಮ್ಮ ನಾಡಿಗೆ ಅವರು ಇರೋದು ಹೆಮ್ಮೆ ಎಂದು ಹೇಳಿದರು.

Tags:
error: Content is protected !!