ಮೈಸೂರು : ನಾಗನಹಳ್ಳಿ ಮತ್ತು ಸಿದ್ದಲಿಂಗಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಕಾವೇರಿ ನದಿಯಿಂದ ಶೀಘ್ರದಲ್ಲೇ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು. ಹಂತ ಹಂತವಾಗಿ ಕ್ಷೇತ್ರದ ಎಲ್ಲಾ ಗ್ರಾಮಗಳು, ಬಡಾವಣೆಗಳಿಗೆ ನೀರು ಪೂರೈಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಬೆಲವತ್ತ ಗ್ರಾಮದಲ್ಲಿ ೧ ಲಕ್ಷದ ೭೫ ಸಾವಿರ ಲೀಟರ್ ಮತ್ತು ೧ ಲಕ್ಷದ ೫ ಸಾವಿರದ ಎರಡು ಟ್ಯಾಂಕ್‌ಗಳ ನಿರ್ವಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ರಮ್ಮನಹಳ್ಳಿ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಬೆಲವತ್ತ ಗ್ರಾಮದಲ್ಲಿ ನಿರ್ವಾಣವಾಗಲಿರುವ ಟ್ಯಾಂಕ್‌ಗೆ ನೀರು ಬಂದು, ಅಲ್ಲಿಂದ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಈ ಕಾಮಗಾರಿಗೆ ೩೦ ಕೋಟಿ ರೂ. ಮಂಜೂರಾಗಿದ್ದು, ಮುಂದಿನ ವರ್ಷದಲ್ಲಿ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದರು. ಸಿದ್ದಲಿಂಗಪುರ, ಕೆ.ಆರ್.ಮಿಲ್, ಬೆಲವತ್ತ, ಹಳೇ ಕೆಸರೆ, ಕಾಮನಕೆರೆಹುಂಡಿ, ನಾಗನಹಳ್ಳಿ, ಶ್ಯಾದನಹಳ್ಳಿ, ಲಕ್ಷ್ಮಿಪುರ ಹಾಗೂ ಕಳಸ್ತವಾಡಿ ಗ್ರಾಮಗಳಿಗೆ ಶಾಶ್ವತವಾದ ಕುಡಿುುಂವ ನೀರನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಖಾಸಗಿ ಬಡಾವಣೆಗಳಿಗೂ ನೀರು ಹರಿಸಲು ಕ್ರಮವಹಿಸಲಾಗಿದೆ. ಅದಕ್ಕಾಗಿ ಯೋಜನೆಯನ್ನು ರೂಪಿಸಿದ್ದು,ಮುಂದಿನ ಎಂಡಿಎ ಸಭೆಯಲ್ಲಿ ಅನುಮೋದನೆ ಸಿಗಲಿದೆ ಎಂದರು.
ಬೆಲವತ್ತ ಗ್ರಾಮದಲ್ಲಿ ಈಗಾಗಲೇ ೮ ಕೋಟಿ ರೂ.ಅನುದಾನದಲ್ಲಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬಾಕಿ ಇರುವ ಮಳೆ ನೀರು ಚರಂಡಿ ಹಾಗೂ ಒಳಚರಂಡಿ ಕಾಮಗಾರಿಯನ್ನು ಶೀಘ್ರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೈಸೂರು ನಗರದಿಂದ ಹಳೆ ಕೆಸರೆ ಗಾಮದ ಹತ್ತಿರ ಮಳೆ ನೀರು ಚರಂಡಿಯಲ್ಲಿ ಕೊಳಚೆ ನೀರು ಹರಿದು ಬರುತ್ತಿದ್ದು, ಈ ನೀರು ಅಕ್ಕ-ಪಕ್ಕದ ಜಮೀನುಗಳಿಗೆ ಹೋಗಿ ರೈತರು ವ್ಯವಸಾಯ ವಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ರೈತರು ತಿಳಿಸಿದನ್ನು ಪರಿಗಣಿಸಿದ ಶಾಸಕರು, ಕೂಡಲೇ ನಗರಪಾಲಿಕೆ ಆಯುಕ್ತರಾದ ಶೇಖ್ ತನ್ವೀರ್ ಆಸಿಫ್ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚಿಸಿ ಮಳೆ ನೀರು ಚರಂಡಿ ಕಾಮಗಾರಿಯನ್ನು ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.
ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಸ್ಕೈವಾಕ್ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲು ಹಾಗೂ ಎನ್‌ಎಚ್‌ಎ ವತಿಯಿಂದ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.
ಜಿಪಂ ವಾಜಿ ಸದಸ್ಯ ನಾಗನಹಳ್ಳಿ ದಿನೇಶ್, ಮುಖಂಡ ಮಂಜುಗೌಡ, ತಾಪಂ ವಾಜಿ ಅಧ್ಯಕ್ಷ ಬೆಲವತ್ತ ಕುಮಾರ್, ಮಾಜಿ ಸದಸ್ಯ ರೇವಣ್ಣ, ಸಿದ್ದಲಿಂಗಪುರ ಗ್ರಾಪಂ ಅಧ್ಯಕ್ಷ ವಾದೇಶ್, ಸಿದ್ದಲಿಂಗಪುರ ಮಂಜು, ನಾಗನಹಳ್ಳಿ ಗ್ರಾಪಂ ಅಧ್ಯಕ್ಷರಾದ ರಶ್ಮಿ ಮಂಜು , ಉಪಾಧ್ಯಕ್ಷರಾದ ಜ್ಯೋತಿ, ಮಾಜಿ ಅಧ್ಯಕ್ಷ ಭಾಸ್ಕರ್, ಸದಸ್ಯರಾದ ಶ್ರೀನಿವಾಸ್, ರವಿಕಾಂತ್, ಪ್ರೇಮಮ್ಮ, ವಿನೋದ್ ಕುವಾರ್, ಕಮಲಾಕ್ಷಿ, ದಶರಥ, ಗಂಗಾಧರ್, ಗುರು, ತೀರ್ಥಕುವಾರ್, ವೆಂಕಟೇಶ್, ಶಶಿಕಲಾ, ಪ್ರಕಾಶ, ರಾಘವೇಂದ್ರ, ವಿನುತ, ಕೆ.ಆರ್.ಮಿಲ್. ಆಶಾ, ಸುಜಾತ ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು.




