ಮೈಸೂರು: ಮೈಸೂರು ನಗರದ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಈ ಕೆಳಕಂಡ ಸ್ಥಳಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಗೆ(ಪಾರ್ಕಿಂಗ್) ನಿರ್ಬಂಧ ವಿಧಿಸಲಾಗಿದೆ.
ಮಾನಸ ರಸ್ತೆ ಜಂಕ್ಷನ್‌ನಿಂದ ಅಂಡರ್‌ಬ್ರಿಡ್ಜ್ ಎಂ.ಜಿ.ರಸ್ತೆವರೆಗೆ ರಸ್ತೆಯ ಉತ್ತರ ದಿಕ್ಕಿಗೆ ಎಲ್.ಎಂ.ವಿ ವಾಹನಗಳಿಗೂ ಹಾಗೂ ದಕ್ಷಿಣ ದಿಕ್ಕಿಗೆ ದ್ವಿಚಕ್ರ ವಾಹನಗಳಿಗೂ ಪಾರ್ಕಿಂಗ್ ನಿಲುಗಡೆಗೆ ಅವಕಾಶ ನೀಡಿ ಹೊರಡಿಸಿರುವ ಅಧಿಸೂಚನೆಯನ್ನು ಮಾರ್ಪಡಿಸಿ, “ಎಂ.ಜಿ.ರಸ್ತೆಯ ಮಾನಸ ರಸ್ತೆ ಜಂಕ್ಷನ್‌ನಿಂದ ಎಂ.ಜಿ.ರಸ್ತೆ ಅಂಡರ್ ಬ್ರಿಡ್ಜ್‌ವರೆಗಿನ ಜೋಡಿ ರಸ್ತೆಯಲ್ಲಿ ಉತ್ತರ ದಿಕ್ಕು ಮತ್ತು ದಕ್ಷಿಣ ದಿಕ್ಕುಗಳಲ್ಲಿ (ರಸ್ತೆಯ ಎರಡು ಕಡೆಗಳಲ್ಲಿ)” ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿ (No Parking) ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.