Mysore
23
overcast clouds

Social Media

ಭಾನುವಾರ, 05 ಏಪ್ರಿಲ 2026
Light
Dark

ವಿನಯ್‌ ಆತ್ಮಹತ್ಯೆ ಪ್ರಕರಣ| ಶಾಸಕ ಪೊನ್ನಣ್ಣ, ಮಂಥರ್ ಗೌಡ ರಾಜೀನಾಮೆಗೆ ಆಗ್ರಹಿಸಿದ ಎಂ.ಜಿ.ಮಹೇಶ್‌

ಮೈಸೂರು: ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಭಾಗವಾಗಿರುವ ಶಾಸಕರಾದ ಎ.ಎಸ್‌.ಪೊನ್ನಣ್ಣ ಹಾಗೂ ಮಂಥರ್‌ ಗೌಡ ರಾಜೀನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಎಂ.ಜಿ.ಮಹೇಶ್‌ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಇಂದು(ಏಪ್ರಿಲ್‌.4) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೊಡಗಿನ ಕಾಂಗ್ರೆಸ್‌ ಶಾಸಕರು, ಪೊಲೀಸರನ್ನು ಬಳಸಿಕೊಂಡು ತಮ್ಮ ರಾಜಕೀಯ ಎದುರಾಳಿಗಳನ್ನು ಮುಗಿಸಲು ಮುಂದಾಗಿದ್ದಾರೆ. ವಿನಯ್ ಸಾವಿಗೆ ಸಿದ್ದರಾಮಯ್ಯ, ಪೊನ್ನಣ್ಣ ಮತ್ತು ಮಂಥರ್ ಗೌಡ ನೇರ ಕಾರಣವಾಗಿದ್ದಾರೆ. ಹೀಗಾಗಿ ಅವರಿಬ್ಬರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಗೂಂಡಾ ಸರ್ಕಾರ ರೀತಿ ವರ್ತನೆ ಮಾಡುತ್ತಿದೆ. ಮೃತ ವಿನಯ್‌ ಸೋಮಯ್ಯ ಅವರ ಡೆತ್‌ ನೋಟ್‌ ನೋಡಿದರೆ ರಕ್ತ ಕುದಿಯುತ್ತದೆ. ವಿನಯ್ ಸಾವಿನ ಮೂಲಕ ರಾಜ್ಯಾದ್ಯಂತ ಜಾಗೃತಿ ಮೂಡಿಸುತ್ತೇವೆ. ಇನ್ನೂ ವಿನಯ್ ಆತ್ಮಹತ್ಯೆ ಪ್ರಕರಣವನ್ನ ಸಿಬಿಐ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.

Tags:
error: Content is protected !!